ಬಿಜೆಪಿ ಆಡಳಿತದಲ್ಲಿರೋ ರಾಜ್ಯಗಳಲ್ಲೂ ರಸಗೊಬ್ಬರ ಕೊರತೆ – ಕೇಂದ್ರದ ವಿರುದ್ಧ ಸಿಎಂ ಕಿಡಿ

Public TV
1 Min Read
Siddaramaiah 13

– ಬಿಜೆಪಿ ನಾಯಕರು ರಸಗೊಬ್ಬರಕ್ಕಾಗಿ ಕೇಂದ್ರಕ್ಕೆ ಒತ್ತಾಯಿಸಲಿ

ಬೆಂಗಳೂರು: ಕರ್ನಾಟಕದಲ್ಲಿ ಮಾತ್ರ ಅಲ್ಲ ಬಿಜೆಪಿ (BJP) ಆಡಳಿತದಲ್ಲಿರುವ ಹರಿಯಾಣ ಹಾಗೂ ಮಧ್ಯ ಪ್ರದೇಶದಲ್ಲೂ ರಸಗೊಬ್ಬರ ಕೊರತೆ (Fertilizer Shortage) ಉಂಟಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ರಸಗೊಬ್ಬರ ಕೊರತೆ ವಿಚಾರವಾಗಿ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ, ರಾಜ್ಯದ ಬೇಡಿಕೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ರಸಗೊಬ್ಬರ ಪೂರೈಕೆ ಮಾಡಿಲ್ಲ. ಈ ಬಗ್ಗೆ ಪತ್ರ ಬರೆದು ಮನವಿಯನ್ನು ಸಹ ಮಾಡಲಾಗಿದೆ. ಕೇಂದ್ರದಿಂದ 6.82 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬರಬೇಕಿತ್ತು, ಆದರೆ ನಮಗೆ ಪೂರೈಕೆಯಾಗಿರುವುದು 5.27 ಲಕ್ಷ ಮೆಟ್ರಿಕ್ ಟನ್. ರಸಗೊಬ್ಬರ ಉತ್ಪಾದನೆ, ಸರಬರಾಜು ಮಾಡುವವರು ನಾವಲ್ಲ ಎಂದು ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ರಸಗೊಬ್ಬರ ಪೂರೈಕೆಗೆ ರಾಜ್ಯದಿಂದ 6 ಬಾರಿ ಮನವಿ – ದಿಢೀರ್ ಕೊರತೆಗೆ ಕಾರಣವೇನು?

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ರಸಗೊಬ್ಬರ ಕೇಳಿದ ರೈತರನ್ನು ಗುಂಡಿಕ್ಕಿ ಕೊಂದಿದ್ದರು. ನಾವು ಅವರಂತಲ್ಲ, ಬಿಜೆಪಿ ನಾಯಕರು ರಾಜಕೀಯ ಟೀಕೆ ಮಾಡಿ ಕಾಲಹರಣ ಮಾಡುವ ಬದಲು ಕೇಂದ್ರ ಸರ್ಕಾರದ ಬಳಿ ಮಾತನಾಡಿ ತಕ್ಷಣ ರಸಗೊಬ್ಬರ ಪೂರೈಕೆ ಮಾಡಿಸಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ರಸಗೊಬ್ಬರದ ಅಭಾವವಿಲ್ಲ: ಪ್ರಹ್ಲಾದ್‌ ಜೋಶಿ

Share This Article