ನವದೆಹಲಿ: ಇಟಲಿಯ ಫೆರಾರಿ ಕಂಪೆನಿ ದೇಶೀಯ ಮಾರುಕಟ್ಟೆಗೆ ಪವರ್ ಫುಲ್ ಸ್ಫೋರ್ಟ್ಸ್ ಕಾರು 812 ಸೂಪರ್ ಫಾಸ್ಟ್ ಕಾರು ಬಿಡುಗಡೆ ಮಾಡಿದೆ.
ಈ ಕಾರಿಗೆ 5.20 ಕೋಟಿ ರೂ. ದರವನ್ನು ನಿಗದಿಪಡಿಸಿದೆ. 6.5 ಲೀಟರ್ ವಿ12 ಯೂನಿಟ್ 234 ಸಿಸಿ ಎಂಜಿನ್ 789 ಬಿಹೆಚ್‍ಪಿ ಮತ್ತು 718 ಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಹೊಂದಿದೆ. ಅಷ್ಟೇ ಅಲ್ಲದೇ 7 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. 2.9 ಸೆಕೆಂಡಿಗೆ 100 ಕಿಲೋಮೀಟರ್ ವೇಗವನ್ನು ತಲುಪಬಲ್ಲ ಸಾಮರ್ಥ್ಯ ಮತ್ತು ಗಂಟೆಗೆ 340ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಸಾಮರ್ಥ್ಯವನ್ನು ಈ ಕಾರು ಹೊಂದಿರುವುದು ವಿಶೇಷ.
Advertisement
Advertisement
ಎರಡು ಡೋರ್ ಒಳಗೊಂಡ ಸ್ಫೋರ್ಟ್ಸ್ ಕಾರ್ 2017ರ ಜಿನಿವಾ ಮೋಟಾರ್ ಶೋನಲ್ಲಿ ಪ್ರಥಮ ಬಾರಿಗೆ ಅನಾವರಣಗೊಂಡಿತ್ತು. ಫುಲ್ ಎಲ್‍ಇಡಿ ಹೆಡ್‍ಲೈಟ್, ಹೊಸ ಇನ್ಫೋಟೈನ್‍ಮೆಂಟ್, ಏರ್ ಕಂಡಿಷನ್ ಒಳಗೊಂಡಿದೆ. ಫೆರಾರಿ ಸ್ಫೋರ್ಟ್ಸ್ ಕಾರು ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್, ಜೊತೆಗೆ ವರ್ಚುವಲ್ ಶಾರ್ಟ್ ವೀಲ್ ಬೇಸ್ 2.0 ಸಿಸ್ಟಂ ಹೊಂದಿದೆ.
Advertisement
ಪ್ರತಿ ಲೀಟರ್ ಪೆಟ್ರೋಲ್ ಗೆ 6.7 ಕಿ.ಮೀ ಮೈಲೇಜ್, 2,750 ಮಿಲಿ ಮೀಟರ್ ವೀಲ್ ಬೇಸ್, 4,657 ಮಿ.ಮೀ ಉದ್ದ, 1,971 ಮಿ.ಮೀ ಅಗಲ, 1,276 ಮಿ.ಮೀ ಎತ್ತರ, 1,525 ಮಿ.ಮೀ ತೂಕವನ್ನು ಈ ಕಾರು ಹೊಂದಿದೆ.