ಬೆಂಗಳೂರು: ವಕ್ಫ್ ಆಸ್ತಿ ವಿವಾದದ ಬಳಿಕ ಮುಜರಾಯಿ ಇಲಾಖೆ (Muzrai Department) ತಮ್ಮ ದೇವಸ್ಥಾನಗಳ (Temple) ಆಸ್ತಿ ರಕ್ಷಣೆಗೆ ಮುಂದಾಗಿದೆ. ಬೆಂಗಳೂರಿನಲ್ಲಿ (Bengaluru) ಇರುವ ಮುಜರಾಯಿ ಇಲಾಖೆ ದೇವಸ್ಥಾನಗಳ ಆಸ್ತಿ ಸರ್ವೆ ಮಾಡಿ ಫೆನ್ಸಿಂಗ್ ಹಾಕಲು ಸಿದ್ಧತೆ ನಡೆದಿದೆ. ಶೀಘ್ರದಲ್ಲೇ ಸರ್ವೆ ಆರಂಭಿಸಿ ಒತ್ತುವರಿ ಆಗಿದ್ದರೆ ತೆರವು ಮಾಡಲು ಮುಂದಾಗಿದೆ.
ವಕ್ಫ್ ವಿವಾದ ಜೋರಾಗಿರುವ ಹೊತ್ತಲ್ಲೇ ಮುಜರಾಯಿ ಇಲಾಖೆ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಮುಜರಾಯಿ ವ್ಯಾಪ್ತಿಯ ದೇವಸ್ಥಾನಗಳ ಜಾಗ ರಕ್ಷಣೆಗೆ ಮುಂದಾಗಿದೆ. ದೇವಸ್ಥಾನದ ಜಾಗಗಳನ್ನು ಸರ್ವೆ ಮಾಡಲು ಜಾಗಕ್ಕೆ ಬೇಲಿತಂತಿ (Fencing) ಹಾಕಲು ನಿರ್ಧಾರ ಮಾಡಿದೆ. ಶೀಘ್ರದಲ್ಲೇ ಸರ್ವೆ ಆರಂಭ ಮಾಡಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿದೆ. ಇದನ್ನೂ ಓದಿ: ರಸ್ತೆ ಅಪಘಾತ: ದರ್ಶನ್ ʻಕಾಟೇರʼ ಸಿನಿಮಾದಲ್ಲಿ ನಟಿಸಿದ್ದ ಬಾಲನಟ ರೋಹಿತ್‌ಗೆ ಗಾಯ
ಬೆಂಗಳೂರಿನಲ್ಲೂ ಸಾವಿರಾರು ಎಕರೆ ಮುಜರಾಯಿ ಜಾಗ ಇದೆ. ಆ ಜಾಗ ಒತ್ತುವರಿ ಆಗಿದೆಯಾ ಎಂದು ಪರಿಶೀಲನೆ ಮಾಡಲಿದ್ದು, ಸರ್ವೆ ಮಾಡಿದಾಗ ಒತ್ತುವರಿ ಆಗಿದ್ದರೆ ಕೂಡಲೇ ಕೋರ್ಟ್ ಮೂಲಕ ತೆರವಿಗೆ ಪರ್ಮಿಷನ್ ತಂದು ತೆರವು ಮಾಡುತ್ತೇವೆ ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಇದನ್ನೂ ಓದಿ: ಗುಲ್ಮಾರ್ಗ್‌ನಲ್ಲಿ ಈ ಸೀಸನ್ನಿನ ಮೊದಲ ಹಿಮಪಾತ, ಶ್ರೀನಗರದಲ್ಲಿ ಮಳೆ