ಲಕ್ನೋ: ಮಕ್ಕಳಿಗೆ ಪಾಠ ಮಾಡಿ, ತಿದ್ದಿ-ಬುದ್ದಿ ಹೇಳಬೇಕಾದ ಶಿಕ್ಷಕಿಯರೇ, ಮಕ್ಕಳ ಮುಂದೆ ಕಿತ್ತಾಡಿರುವ ವೀಡಿಯೋವೊಂದು ಸೊಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಹೌದು, ಉತ್ತರ ಪ್ರದೇಶದ (Uttar Pradesh) ಹಮೀರ್‍ಪುರ (Hamirpur) ಜಿಲ್ಲೆಯ ಬಾಲಕಿಯರ ಪ್ರೌಢಶಾಲೆಯಲ್ಲಿ ಮಹಿಳಾ ಶಿಕ್ಷಕಿರ ನಡುವೆ ಮಾರಾಮಾರಿ ನಡೆದಿದೆ. ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ (Gandhi Jayanti celebrations) ವೇಳೆ ಈ ಘಟನೆ ನಡೆದಿದೆ. ಸ್ವಚ್ಛತೆ ವಿಚಾರವಾಗಿ ಶಿಕ್ಷಕರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ದೆಹಲಿಯಲಿದ್ದ 500 ರೂ. ಮಾಸ್ಕ್ ಫೈನ್ ವಾಪಸ್ – 6 ತಿಂಗಳ ಬಳಿಕ ರಿಲೀಫ್
Advertisement
A fight broke out between the two female teacher of Govt School in Hamirpur Uttar Pradesh. pic.twitter.com/iC69WoZzhv
— Ahmed Khabeer احمد خبیر (@AhmedKhabeer_) October 3, 2022
Advertisement
ಕ್ಲಾಸ್ ತುಂಬ ಮಕ್ಕಳಿರುವಾಗ ಅವರ ಮುಂದೆಯೇ ಶಿಕ್ಷಕಿಯರು ಪರಸ್ಪರ ನಿಂದಿಸುತ್ತಾ, ಹೊಡೆದಾಡಿಕೊಂಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ವಿದ್ಯಾರ್ಥಿಗಳು ನೋಡುತ್ತಿದ್ದರೂ ಕೊಂಚ ಕೂಡ ಮುಜುಗರ ಹೊಂದದೆ ಸುಮಾರು 45 ನಿಮಿಷಗಳ ಕಾಲ ಜಗಳ ಮಾಡಿದ್ದಾರೆ. ಕೆಲವು ವಿದ್ಯಾರ್ಥಿಗಳು ಸಹ ಇಬ್ಬರು ಶಿಕ್ಷಕಿಯ ಜಗಳ ಬಿಡಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
Advertisement
Advertisement
ಈ ವೀಡಿಯೋ ವೈರಲ್ ಬಳಿಕ ಜಗಳವಾಡಿದ ಮೂವರು ಶಿಕ್ಷಕಿಯರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರೀತಿ ನಿಗಮ್, ಸಹಾಯಕ ಶಿಕ್ಷಕಿ ನಹಿದ್ ಹಶ್ಮಿ ಮತ್ತು ಮಹಿಳಾ ಸಹಾಯಕಿ ಪುಷ್ಪಲತಾ ಪಾಂಡೆ ಅಮಾನತುಗೊಂಡವರಾಗಿದ್ದಾರೆ. ಇದನ್ನೂ ಓದಿ: ಬ್ಯಾಕ್ ಟೂ ಬ್ಯಾಕ್ ಭದ್ರತಾ ಪಡೆಗಳಿಂದ ನಾಲ್ವರು ಭಯೋತ್ಪಾದಕರ ಎನ್‍ಕೌಂಟರ್