ಬೀಜಿಂಗ್: 81 ವರ್ಷದ ತಾತನ ಜೀವವನ್ನು ವಿದ್ಯಾರ್ಥಿನಿಯೊಬ್ಬಳು ಉಳಿಸಿದ್ದು, ಈಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆ ಚೀನಾದ ಕ್ಸನ್ಹುಅ ಪ್ರಾಂತ್ಯದಲ್ಲಿ ನಡೆದಿದೆ. 81 ವಯಸ್ಸಿನ ತಾತ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಅವರು ಇದ್ದಕ್ಕಿದ್ದಂತೆ ಓಡಾಡುವ ರಸ್ತೆಯ ಮೇಲೆಯೇ ಕುಸಿದು ಬಿದ್ದಿದ್ದಾರೆ.
Advertisement
ಅಲ್ಲೇ ಓಡಾಡುತ್ತಿದ್ದ ಜನರು ನೋಡುತ್ತಾ ನಿಂತಿದ್ದರು. ಆದರೆ ಯಾರು ಅವರ ಸಹಾಯಕ್ಕೆ ಬಾರದೆ ಸುಮ್ಮನೆ ನಿಂತು ನೋಡುತ್ತಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಓಡಿ ಬಂದಿದ್ದಾಳೆ. ಆಗ ತಾತನ ಮೇಲೆ ಕುಳಿತುಕೊಂಡು ಎದೆ ಒತ್ತಿದ್ದಾಳೆ. ಬಳಿಕ ವಿದ್ಯಾರ್ಥಿನಿ ತನ್ನ ಬಾಯಿಯ ಮೂಲಕ ಗಾಳಿ ಕೊಡುವ ಪ್ರಯತ್ನ ಮಾಡುತ್ತಾಳೆ. ಆಗ ಅಲ್ಲಿದ್ದವರು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಆದರೂ ಆಕೆ ಅವರ ಮಾತಿಗೆ ತಲೆ ಕೆಡಿಸಿಕೊಳ್ಳದೇ ಮತ್ತೆ ಮತ್ತೆ ತಾತನಿಗೆ ಗಾಳಿ ಕೊಡುತ್ತಾಳೆ. ಕೊನೆಗೆ ಆ ತಾತ ಉಸಿರಾಡಿದ್ದು, ಎದ್ದು ಕುಳಿತುಕೊಳ್ಳುತ್ತಾರೆ.
Advertisement
ಈ ಎಲ್ಲಾ ದೃಶ್ಯವನ್ನು ಅಲ್ಲಿದ್ದವರು ವಿಡಿಯೋ ಮಾಡಿದ್ದಾರೆ ಬಳಿಕ ಅದನ್ನು China Xinhua News ಎಂಬ ಫೇಸ್ ಬುಕ್ ಪೇಜ್ ಗೆ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನು ಪೋಸ್ಟ್ ಮಾಡಿದ 5 ಗಂಟೆಯಲ್ಲಿಯೇ 3 ಲಕ್ಷ 13 ಸಾವಿರ ವ್ಯೂವ್ಸ್ ಕಂಡಿದೆ. ಅಷ್ಟೇ ಅಲ್ಲದೇ 18 ಸಾವಿರ ಜನರು ಲೈಕ್ಸ್ ಮಾಡಿದ್ದಾರೆ. ಜೊತೆಗೆ 4,400 ಜನರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ.
Advertisement
https://www.facebook.com/XinhuaNewsAgency/videos/2595827830444645/