ರಾಜಸ್ಥಾನದ ಆಸ್ಪತ್ರೆ ಐಸಿಯುನಲ್ಲೇ ಮಹಿಳಾ ರೋಗಿ ಮೇಲೆ ರೇಪ್ – ಮತ್ತು ಬರುವ ಇಂಜೆಕ್ಷನ್ ಕೊಟ್ಟು ಅತ್ಯಾಚಾರ

Public TV
2 Min Read
ICU

– ಮಹಿಳೆಯ ಕುಟುಂಬಸ್ಥರು ಐಸಿಯು ಹೊರಗಡೆ ಇದ್ದಾಗಲೇ ನಡೆದ ಕೃತ್ಯ

ಜೈಪುರ: ರಾಜಸ್ಥಾನದ ಅಲ್ವಾರ್‌ನಲ್ಲಿರುವ ಇಎಸ್‌ಐಸಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ (ESIC Medical College Hospital) ಐಸಿಯುಗೆ (ತೀವ್ರ ನಿಗಾ ಘಟಕ) ದಾಖಲಾಗಿದ್ದ ಮಹಿಳಾ ರೋಗಿ ಮೇಲೆ ನರ್ಸಿಂಗ್‌ ಸಿಬ್ಬಂದಿ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಸಂತ್ರಸ್ತೆ ಕುಟುಂಬಸ್ಥರು ಐಸಿಯು (ICU ವಾರ್ಡ್‌ನ ಹೊರಗಿದ್ದಾಗಲೇ ಘಟನೆ ಸಂಭವಿಸಿದೆ.

ESIC Medical College

ವರದಿಗಳ ಪ್ರಕಾರ, ಇದೇ ತಿಂಗಳ ಜೂನ್‌ 4ರಂದು (ಬುಧವಾರ) ರಾತ್ರಿ 1:30ರ ಸುಮಾರಿಗೆ ಘಟನೆ ನಡೆದಿದೆ. 32 ವರ್ಷದ ಮಹಿಳೆಯನ್ನ ಇದೇ ಜೂನ್‌ 2ರಂದು ಟ್ಯೂಬೆಕ್ಟಮಿ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್‌ 4ರಂದು ಶಸ್ತ್ರಚಿಕಿತ್ಸೆ ನಂತರ ಆಕೆಯನ್ನ ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಈ ವೇಳೆ‌ ನರ್ಸಿಂಗ್‌ ಸಿಬ್ಬಂದಿ (Nursing Staff) ಮಹಿಳೆಗೆ ಮತ್ತು ಬರುವ ಇಂಜೆಕ್ಷನ್‌ ನೀಡಿದ್ದಾನೆ. ಜೊತೆಗೆ ಆಕೆ ಮಲಗಿದ ನಂತರ ಆಕೆಯ ಪತಿಯನ್ನ ಹೊರ ಹೋಗುವಂತೆ ಸೂಚಿಸಿದ್ದಾನೆ. ಇದನ್ನೂ ಓದಿ: ಬೆಂಗಳೂರು | ಸೂಟ್‌ಕೇಸ್‌ನಲ್ಲಿ ಬಾಲಕಿ ಶವ ಪತ್ತೆ ಪ್ರಕರಣ – ಬಿಹಾರದಲ್ಲಿ 7 ಆರೋಪಿಗಳು ಅರೆಸ್ಟ್‌

medical student

ಇಂಜೆಕ್ಷನ್‌ ನೀಡಿದ್ದರ ಪರಿಣಾಮವಾಗಿ ಸಂತ್ರಸ್ತೆ ಅರೆ ಪ್ರಜ್ಞಾವಸ್ಥೆ ತಲುಪಿದ್ದಾರೆ. ಮರುದಿನ ಜೂನ್ 5 ರಂದು, ರಾತ್ರಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ತನ್ನ ಪತಿಗೆ ತಿಳಿಸಿದ್ದಾರೆ. ನರ್ಸಿಂಗ್ ಸಿಬ್ಬಂದಿ ತನ್ನ ಸ್ಥಿತಿಯನ್ನ ದುರುಪಯೋಗ ಮಾಡಿಕೊಂಡಿದ್ದಾನೆಂದು ಹೇಳಿದ್ದಾರೆ. ಅರೆಪ್ರಜ್ಞಾವಸ್ಥೆಯಲ್ಲಿದ್ದರಿಂದ ನಾನು ವಿರೋಧಿಸಲು ಆಗಲಿಲ್ಲ, ಸಹಾಯಕ್ಕಾಗಿ ಕರೆಯಲೂ ಆಗಲಿಲ್ಲ ಎಂದು ಹೇಳಿಕೊಂಡಿದ್ದಾಳೆ. ಈ ವಿಷಯವನ್ನು ಪತಿಗೆ ತಿಳಿಸಿದ ಬಳಿಕ ಪೊಲೀಸರಿಗೆ (Alwar Police) ಸಂತ್ರಸ್ತೆ ಪತಿ ದೂರು ನೀಡಿದ್ದಾರೆ.

ಜೂನ್‌ 6ರಂದು ಸಂತ್ರಸ್ತೆ ವೈದ್ಯೆ ಡಾ. ದೀಪಿಕಾ ಅವರಿಗೆ‌ ಘಟನೆ ಬಗ್ಗೆ ತಿಳಿಸಿದ್ದಾರೆ. ಆರೋಪಿಯಾದ ನರ್ಸಿಂಗ್‌ ಸಿಬ್ಬಂದಿಯನ್ನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎಸ್‌ಎಚ್‌ಒ ಅಜಿತ್ ಬದ್ಸಾರ ದೃಢಪಡಿಸಿದರು.

ಘಟನೆ ನಂತರ ಇಎಸ್ಐಸಿ ವೈದ್ಯಕೀಯ ಕಾಲೇಜಿನ ಡೀನ್ ಡಾ. ಅಸಿಮ್ ದಾಸ್ ಅವರು ಆಂತರಿಕ ಆಡಳಿತಾತ್ಮಕ ಸಮಿತಿಯನ್ನ ರಚಿಸಿದ್ದಾರೆ. ಅಲ್ಲದೇ ಪೊಲೀಸ್‌ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿಯೂ ಹೇಳಿದ್ದಾರೆ. ಇದನ್ನೂ ಓದಿ: ಪರ ಪುರುಷನೊಂದಿಗೆ ಸರಸಕ್ಕೆ ಅಡ್ಡಿ – ಅನ್ನಕ್ಕೆ ವಿಷ ಹಾಕಿ ಇಡೀ ಕುಟುಂಬವನ್ನೇ ಮುಗಿಸಲು ಯತ್ನಿಸಿದ್ದಾಕೆ ಅರೆಸ್ಟ್‌

ಎಂಐಎ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.  ಇದನ್ನೂ ಓದಿ: ಮೆಟ್ರೋ ಪಿಲ್ಲರ್‌ಗೆ ಡಿಕ್ಕಿಯಾದ ಬಿಎಂಟಿಸಿ ಬಸ್ – 10ಕ್ಕೂ ಹೆಚ್ಚು ಮಂದಿಗೆ ಗಾಯ

Share This Article