ಬೆಂಗಳೂರು: 10ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಬರುವ ಪಾಠವೊಂದು ಸ್ತ್ರೀ ದ್ವೇಷಿ ಚಿಂತನೆಯನ್ನು ಬಿಂಬಿಸುತ್ತಿದೆ ಎಂದು ಮಹಿಳಾ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
10ನೇ ತರಗತಿಯ `ಬನ್ನಂಜೆ ಗೋವಿಂದಾಚಾರ್ಯ ಶುಕನಾಸನ ಉಪದೇಶ’ ಪಠ್ಯದಲ್ಲಿ ಹೆಣ್ಣನ್ನು ಸಂಪತ್ತು ಸಿರಿಗೆ ಹೋಲಿಕೆ ಮಾಡಲಾಗಿದೆ. ಅದರಲ್ಲಿ ಕೀಳುಮಟ್ಟದ ಪದಪ್ರಯೋಗವಾಗಿದೆ ಅಂತಾ ಆಕ್ಷೇಪ ವ್ಯಕ್ತವಾಗಿದೆ. ಇದನ್ನೂ ಓದಿ: ಸಿಇಟಿ ಪರೀಕ್ಷೆಗೂ ಹಿಜಬ್ ನಿಷೇಧ – ಕೆಇಎ
Advertisement
ಆಕೆಯಿಂದ ಎಲ್ಲರೂ ಮೋಸಹೋಗುತ್ತಾರೆ. ಆಕೆ ಚಂಚಲೆ ಮತ್ತು ಆಕೆ ನಿರ್ವಂಚನೆಯಿಂದ ಯಾರನ್ನು ಪ್ರೀತಿಸಲಾರಳು ಅಂತಾ ಇದ್ರಲ್ಲಿ ಉಲ್ಲೇಖವಾಗಿದ್ದು ಮಕ್ಕಳಲ್ಲಿ ಇದ್ಯಾವ ಭಾವನೆ ಬಿತ್ತಲಿದೆ ಇದು ಹೆಣ್ಣಿನ ಚಾರಿತ್ರ್ಯ ಹರಣ ಮಾಡೋದಲ್ವೇ ಎಂದು AIMSS ಸಂಘಟನೆ ಕಿಡಿಕಾರಿದೆ.