ಬೆಂಗಳೂರು/ಬೆಳಗಾವಿ: ರಾಜ್ಯದಲ್ಲಿ ಹೆಣ್ಣು ಭ್ರೂಣಹತ್ಯೆ ನಿಂತಿಲ್ಲ. ಭ್ರೂಣಹತ್ಯೆ ತಡೆಗೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ (Dinesh Gundurao) ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸಿ.ಟಿ ರವಿ (CT Ravi) ಪ್ರಶ್ನೆ ಕೇಳಿದರು. ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗುತ್ತಿದೆ. ಸರ್ಕಾರಿ ವೈದ್ಯರು, ನರ್ಸ್ಗಳು ಇದ್ದಾರೆ. ಭ್ರೂಣ ಹತ್ಯೆ ಮಾಡೋ ಹೈಟೆಕ್ ಜಾಲ ಕೆಲಸ ಮಾಡ್ತಿದೆ. ಈಗ ಇರುವ ಕಾನೂನು ಸರಿಯಾಗಿ ಕೆಲಸ ಮಾಡ್ತಿಲ್ಲ. ಹೆಣ್ಣು ಭ್ರೂಣ ಹತ್ಯೆ ನಿಷೇಧಕ್ಕೆ ಮತ್ತಷ್ಟು ಪ್ರಬಲ ಕಾನೂನು ಬೇಕು. ಇಂತಹ ಅಕ್ರಮದಲ್ಲಿ ಭಾಗಿಯಾಗೋ ವೈದ್ಯರ ಲೈಸೆನ್ಸ್ ರದ್ದು ಮಾಡಿ ಎಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಕಲಿಸದೇ ಹೋದ್ರೆ ಕ್ರಮ: ಮಧು ಬಂಗಾರಪ್ಪ
ಇದಕ್ಕೆ ಸಚಿವ ದಿನೇಶ್ ಗುಂಡೂರಾವ್ ಉತ್ತರ ನೀಡಿ, ಹೆಣ್ಣು ಭ್ರೂಣ ಹತ್ಯೆ ಸಾಮಾಜಿಕ ಪಿಡುಕು. ಯಾರು ಒತ್ತಡದಿಂದ ಭ್ರೂಣ ಹತ್ಯೆ ಮಾಡಿಕೊಳ್ತಿಲ್ಲ. ಅವರೇ ಇಚ್ಛೆಪಟ್ಟು ಮಾಡ್ತಾ ಇದ್ದಾರೆ. ಭ್ರೂಣ ಹತ್ಯೆ ನಿಷೇಧ ಇದೆ. ಭ್ರೂಣ ಪತ್ತೆಗೆ ಹೊಸ ಹೊಸ ಯಂತ್ರ ಬಂದಿವೆ. ಇದರಿಂದ ಪತ್ತೆ ಹಚ್ಚುತ್ತಿದ್ದಾರೆ. ಕೇಂದ್ರದ ಜೊತೆ ನಾವು ಈ ಸಂಬಂಧ ಮಾತಾಡ್ತಿದ್ದೇವೆ. ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ನಿಂತಿಲ್ಲ ನಡೆಯುತ್ತಿದೆ ಎಂದಿದ್ದಾರೆ.
ಹೆಣ್ಣು ಭ್ರೂಣ ಹತ್ಯೆ ಮಾನಿಟರ್ ಮಾಡಲು ಪ್ರತಿ ಜಿಲ್ಲೆಗೆ ನೋಡಲ್ ಆಫೀಸ್ ಹಾಕೋಕೆ ತೀರ್ಮಾನ ಮಾಡಲಾಗಿದೆ. ಕೆಲವು ತಾಲೂಕು ಆಸ್ಪತ್ರೆಗಳಲ್ಲಿ ಗಂಡು ಮಕ್ಕಳ ಜನನ ಜಾಸ್ತಿ ಆಗ್ತಿದೆ. ಇಂತಹ ಕಡೆ ಪರಿಶೀಲನೆ ಮಾಡ್ತಿದ್ದೇವೆ. ರಹಸ್ಯವಾಗಿ ತನಿಖೆ ಮಾಡಿ, ಹೆಣ್ಣು ಭ್ರೂಣ ಹತ್ಯೆ ತಡೆಗೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ಸರ್ಕಾರ ಬಂದ ಮೇಲೆ ಕಾನೂನು ತಿದ್ದುಪಡಿ ಮಾಡಿದ್ದೇವೆ. ಮಾತ್ರೆ ತಗೊಂಡು ಅಬಾರ್ಷನ್ ಮಾಡುವ ವ್ಯವಸ್ಥೆ ಆಗ್ತಿದೆ. ಇದನ್ನು ನಿಯಂತ್ರಣ ಮಾಡಬೇಕು. ಈ ನಿಟ್ಟಿನಲ್ಲಿ ಬಲವಾದ ಕಾನೂನು ತಿದ್ದುಪಡಿ ತರುವ ಬಗ್ಗೆ ಚಿಂತನೆ ಮಾಡ್ತೀವಿ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ಇಲ್ಲ: ಖಂಡ್ರೆ ಸ್ಪಷ್ಟನೆ

