ತಿರುವನಂತಪುರಂ: ಮಲಯಾಳಂ ಚಿತ್ರೋದ್ಯಮದಲ್ಲಿ ಮಾತ್ರ ಕಾಸ್ಟಿಂಗ್ ಕೌಚ್ ಇಲ್ಲ.. ಕೇರಳ ರಾಜಕಾರಣದಲ್ಲೂ ಇದು ಹಾಸುಹೊಕ್ಕಾಗಿದ್ಯಂತೆ. ಕೇರಳ ಕಾಂಗ್ರೆಸ್ ಘಟಕದಲ್ಲಿ ಕ್ಯಾಸ್ಟಿಂಗ್ ಕೌಚ್ (Casting Couch) ರೀತಿಯ ಪರಿಸ್ಥಿತಿಗಳಿವೆ ಎಂದು ಕಾಂಗ್ರೆಸ್ ನಾಯಕಿ ಸಿಮಿ ರೋಸ್‌ಬೆಲ್ ಜಾನ್ (Simi Rosebell John) ಬಾಂಬ್ ಸಿಡಿಸಿದ್ದಾರೆ. ಈ ಬೆನ್ನಲ್ಲೇ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC)ಯು ರೋಸ್‌ಬೆಲ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ.
Advertisement
ಪಕ್ಷದಲ್ಲಿ ತುಂಬಾ ಹೆಣ್ಮಕ್ಕಳು, ಪುರುಷ ನಾಯಕರಿಂದ ಆಕ್ಷೇಪಾರ್ಹವಾದ ರೀತಿ ಕಿರುಕುಳ ಎದುರಿಸ್ತಿದ್ದಾರೆ. ಉನ್ನತ ಹುದ್ದೆಗಳ ಆಸೆ ತೋರಿಸಿ ಪಕ್ಷದ ಕೆಲವು ಹಿರಿಯ ನಾಯಕರು, ಮಹಿಳಾ ನಾಯಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆ ಭಯಾನಕ ಅನುಭವಗಳನ್ನು ಕೆಲವರು ತಮ್ಮ ಬಳಿ ಹಂಚಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಅಗತ್ಯ ಸಾಕ್ಷ್ಯಗಳು ನನ್ನ ಬಳಿಯಿವೆ. ಸಮಯ ಬಂದಾಗ ಅವುಗಳನ್ನು ಬಯಲು ಮಾಡ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಜಲ ಜೀವನ್ ಮಿಷನ್ ಯೋಜನೆಯಲ್ಲೂ ಅಕ್ರಮ ಆರೋಪ – 116 ಟೆಂಡರ್ ಹಣ ಮುಟ್ಟುಗೋಲು
Advertisement
Advertisement
ಕೆಲ ಮಹಿಳಾಮಣಿಗಳು ಅರ್ಹತೆ ಇಲ್ಲದಿದ್ದರೂ ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಹೈಕಮಾಂಡ್‌ಗೆ ಆಪ್ತವಾಗಿರುವ ಮಂದಿಗೆ ಅವಕಾಶ ಸಿಕ್ತಿವೆ ಎಂದು ಆರೋಪಿಸಿದ್ದಾರೆ. ಸಿಮಿ ರೋಸ್‌ಬೆಲ್ ಮಾತು ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿವೆ. ಕಾಂಗ್ರೆಸ್‌ನಲ್ಲೂ ಆಂತರಿಕ ಸಂಘರ್ಷಕ್ಕೆ ಕಾರಣವಾಗಿವೆ. ಇದನ್ನೂ ಓದಿ: ಆಂಧ್ರ, ತೆಲಂಗಾಣದಲ್ಲಿ ಭಾರೀ ಮಳೆಗೆ ಪ್ರವಾಹ ಪರಿಸ್ಥಿತಿ – 9 ಸಾವು, ಜನಜೀವನ ಅಸ್ತವ್ಯಸ್ತ
Advertisement
ಸಿಮಿ ರೋಸ್‌ಬೆಲ್ ವಿರುದ್ಧ ಕೆಪಿಸಿಸಿಯ ರಾಜಕೀಯ ವ್ಯವಹಾರಗಳ ಸಮಿತಿಯ ಮಹಿಳಾ ಮುಖಂಡರು, ಪಿಸಿಸಿಯ ಮಹಿಳಾ ಪದಾಧಿಕಾರಿಗಳು ಮತ್ತು ಮಹಿಳಾ ಕಾಂಗ್ರೆಸ್ ಮುಖ್ಯಸ್ಥರು ಹೈಕಮಾಂಡ್‌ಗೆ ದೂರು ನೀಡಿದೆ. ಆದ್ರೆ, ಈ ಆರೋಪಗಳೆಲ್ಲಾ ಸುಳ್ಳು ಎಂದು ಕೇರಳ ಕಾಂಗ್ರೆಸ್ ಘಟಕ ತಿಳಿಸಿದೆ. ಅಲ್ಲದೇ, ತನಿಖೆಗೂ ಮುಂದಾಗಿದೆ. ಇದನ್ನೂ ಓದಿ: ಮಹಾ ಮಳೆಗೆ ಅವಾಂತರ – ಸೋಮವಾರ ಬೀದರ್ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ