ಭೋಪಾಲ್: ದಕ್ಷಿಣ ಆಫ್ರಿಕಾದಿಂದ (South Africa) ಭಾರತಕ್ಕೆ (India) ತರಲಾಗಿದ್ದ ಮತ್ತೊಂದು ಚೀತಾ (Cheetah) ಮಧ್ಯಪ್ರದೇಶದ (Madhya Pradesh) ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) ಮಂಗಳವಾರ ಸಾವನ್ನಪ್ಪಿದೆ. ಈ ಮೂಲಕ ಕಳೆದ 40 ದಿನಗಳಲ್ಲಿ ಇದು ಮೂರನೇ ಸಾವಾಗಿದೆ.
ದಕ್ಷ ಹೆಸರಿನ ಹೆಣ್ಣು ಚೀತಾ ಇಂದು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಕ್ಷಣ ಅದಕ್ಕೆ ಅಗತ್ಯ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಧ್ಯಾಹ್ನ 12 ರ ವೇಳೆಗೆ ಅದು ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಭದ್ರತಾ ಪಡೆಗಳ ದಾಳಿ – ಮೂವರು ನಕ್ಸಲರ ಹತ್ಯೆ
ದಕ್ಷಳನ್ನು ಉದ್ಯಾನವನದ ಆವರಣದಲ್ಲಿ ಬಿಡಲಾಗಿತ್ತು. ಅಲ್ಲದೆ ಅಲ್ಲಿ ಎರಡು ಗಂಡು ಚೀತಾಗಳನ್ನು ಬಿಡಲಾಗಿತ್ತು. ಈ ವೇಳೆ ಗಂಡು ಚೀತಾಗಳು ಅದರೊಂದಿಗೆ ಕಾಳಗ ನಡೆಸಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
70 ವರ್ಷಗಳ ಹಿಂದೆ ದೇಶದಲ್ಲಿ ಕಣ್ಮರೆಯಾಗಿದ್ದ ಚೀತಾ ಪ್ರಭೇದವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ 20 ಚೀತಾಗಳನ್ನು ಭಾರತಕ್ಕೆ ತರಲಾಗಿತ್ತು. ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ಸೆಪ್ಟೆಂಬರ್ ಮತ್ತು ಫೆಬ್ರವರಿಯಲ್ಲಿ ಒಟ್ಟು 20 ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿತ್ತು.
ಉಳಿದ ಚೀತಾಗಳು ಸಂಪೂರ್ಣವಾಗಿ ಆರೋಗ್ಯವಂತರಾಗಿ ಕಾಣುತ್ತಿವೆ. ಬೇಟೆಯಲ್ಲಿ ತೊಡಗಿಕೊಂಡಿವೆ. ಅಲ್ಲದೆ ಇತರ ನೈಸರ್ಗಿಕ ಆರೋಗ್ಯ ನಡವಳಿಕೆಗಳನ್ನು ಪ್ರದರ್ಶಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮುನ್ನ ಒಂದು ಹೆಣ್ಣು ಚೀತಾ ಮತ್ತು ಒಂದು ಗಂಡು ಚೀತಾ ಮಾ. 27 ಹಾಗೂ ಏ. 23 ರಂದು ಸಾವನ್ನಪ್ಪಿದ್ದವು. ಇದನ್ನೂ ಓದಿ: ಮುಸ್ಲಿಂ ಮೀಸಲಾತಿ ರದ್ದು ಪ್ರಕರಣ – ರಾಜಕೀಯ ಹೇಳಿಕೆಗಳಿಗೆ ಸುಪ್ರೀಂ ಕಿಡಿ