ಆನೇಕಲ್: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (Bannerghatta National Park) ಹೆಣ್ಣು ಕಾಡೆಮ್ಮೆಯೊಂದು ಬಲಿಯಾಗಿದೆ.
ಪ್ರಾಣಿ ವಿನಿಮಯ ಯೋಜನೆ ಅಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಹೈದರಾಬಾದ್‌ನ ನೆಹರು ಝೂಲಾಜಿಕಲ್‌ಗೆ ಕಾಡೆಮ್ಮೆಯನ್ನು ಶಿಫ್ಟ್ ಮಾಡಬೇಕಿತ್ತು. ಈ ಹಿನ್ನೆಲೆ ಅರವಳಿಕೆ ಚುಚ್ಚುಮದ್ದು ನೀಡಿ ಹೆಣ್ಣು ಕಾಡೆಮ್ಮೆಯನ್ನು ಸೆರೆಹಿಡಿದು ಕ್ವಾರಂಟೈನ್ ಆವರಣಕ್ಕೆ ಶಿಫ್ಟ್ ಮಾಡಲು ಅಧಿಕಾರಿಗಳು ಮುಂದಾಗಿದ್ದರು.ಇದನ್ನೂ ಓದಿ:ನಿಯಮ ಉಲ್ಲಂಘಿಸಿ ಕಟ್ಟಡ ಕಟ್ಟಿದವರಿಗೆ ಗುಡ್‌ನ್ಯೂಸ್ – ಪರಿಷ್ಕೃತ ನಕ್ಷೆ ಪಡೆಯಲು ರಾಜ್ಯ ಸರ್ಕಾರ ಅಸ್ತು
ಸೆರೆಹಿಡಿಯುವಾಗ ಕಾಡೆಮ್ಮೆಗೆ ಅರವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ಆದರೆ ಅರವಳಿಕೆ ನೀಡಿದ ಬಳಿಕ ಕಾಡೆಮ್ಮೆ ಚೇತರಿಸಿಕೊಳ್ಳದೇ ಸಾವನ್ನಪ್ಪಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿ ಹಾಗೂ ಅಧಿಕಾರಿಗಳು ಹೆಣ್ಣು ಕಾಡೆಮ್ಮೆಯನ್ನು ಸೆರೆಹಿಡಿಯುವಾಗ ಅಗತ್ಯ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದರಿಂದ ಹೀಗಾಗಿದೆ ಎಂಬ ಆರೋಪ ಕೇಳಿ ಬಂದಿದೆ.ಇದನ್ನೂ ಓದಿ: ರಾಷ್ಟ್ರೀಯ ಏಕತಾ ದಿನ | ಭಾರತದೊಂದಿಗೆ ಇಡೀ ಕಾಶ್ಮೀರ ಒಗ್ಗೂಡಿಸುವ ಪಟೇಲ್‌ರ ಪ್ರಯತ್ನಕ್ಕೆ ನೆಹರೂ ಅಡ್ಡಿ; ಮೋದಿ ವಾಗ್ದಾಳಿ
