ಗದಗ: ಫೀ ಕಟ್ಟಿಲ್ಲ ಎಂದು ಖಾಸಗಿ ಶಿಕ್ಷಣ ಸಂಸ್ಥೆ ಮಕ್ಕಳನ್ನೇ ಶಾಲಾ ತರಗತಿಯಿಂದ ಹೊರ ಹಾಕಿದೆ.
ಜಿಲ್ಲೆಯ ಗಜೇಂದ್ರಗಢದ ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆ(ಸಿಬಿಎಸ್‍ಸಿ) ಶಾಲೆಯ ಆಡಳಿತ ಮಂಡಳಿ ಮಕ್ಕಳನ್ನು ತರಗತಿಯಿಂದ ಹೊರಗೆ ಹಾಕುವ ಮೂಲಕ ಅಮಾನವೀಯವಾಗಿ ವರ್ತಿಸಿದೆ.
Advertisement
ಇದರಿಂದ ಮನನೊಂದ ನೂರಾರು ಮಕ್ಕಳು ಕಣ್ಣೀರಿಡುತ್ತಿದ್ದಾರೆ. ತ್ರೈಮಾಸಿಕ ಪರೀಕ್ಷೆ ನಡೆಯುತ್ತಿದ್ದರೂ ಪೋಷಕರು ಫೀ ತುಂಬಿಲ್ಲ ಎಂಬ ಕಾರಣಕ್ಕೆ ಮಕ್ಕಳನ್ನ ಹೊರಹಾಕಲಾಗಿದೆ. 2ನೇ ಹಂತದ ಹಣ ಬಾಕಿ ಇರುವ ನೂರಾರು ಮಕ್ಕಳನ್ನು ತರಗತಿ ಕೊಠಡಿಯಿಂದ ಹೊರಹಾಕಿದ್ದಾರೆ.
Advertisement
Advertisement
ಫೀ ತುಂಬುವಂತೆ ನಮಗೆ ನೋಟೀಸ್ ಅಥವಾ ಯಾವುದೇ ಮಾಹಿತಿ ನೀಡದೆ ಏಕಾಏಕಿ ಮಕ್ಕಳನ್ನು ಶಾಲೆಯಿಂದ ಹೊರಹಾಕಿದ್ದಾರೆ ಎಂದು ಆಡಳಿತ ಮಂಡಳಿಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್.ಕೆ.ಜಿ ಯಿಂದ 10ನೇ ತರಗತಿ ವರೆಗೆ ಈ ಶಾಲೆಯಲ್ಲಿ ವ್ಯಾಸಂಗ ಮಾಡಬಹುದಾಗಿದೆ. ಸಮವಸ್ತ್ರ, ಸ್ಕೂಲ್ ಬಸ್, ಪುಸ್ತಕಗಳನ್ನು ಹೊರತು ಪಡಿಸಿ, ಎಲ್.ಕೆ.ಜಿ ಮಕ್ಕಳಿಗೆ 10 ಸಾವಿರ ರೂ., 1 ರಿಂದ 3ನೇ ತರಗತಿ 13 ಸಾವಿರ ರೂ., 4 ರಿಂದ 7ನೇ ತರಗತಿ 15 ಸಾವಿರ ರೂ. ಹಾಗೂ 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 20 ಸಾವಿರ ರೂ.ಗಳ ವರೆಗೆ ಶುಲ್ಕ ಪಡೆಯುತ್ತಾರೆ. ಇದೀಗ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರ ಹಾಕುವ ಮೂಲಕ ಮಕ್ಕಳ ಹಕ್ಕುಗಳನ್ನು ಶಾಲೆ ಉಲ್ಲಂಘನೆ ಮಾಡಿದೆ ಎಂದು ಪೋಷಕರು ಆರೋಪಿಸಿದ್ದಾರೆ.