ದೊಡ್ಡಣ್ಣನ ಎಂಟ್ರಿಯಿಂದ 3ನೇ ಮಹಾಯುದ್ಧದ ಆತಂಕ – ಇರಾನ್ ಬೆಂಬಲಕ್ಕೆ ನಿಂತ ರಷ್ಯಾ

Public TV
2 Min Read
Iran Israel america 2

ಟೆಹ್ರಾನ್/ಟೆಲ್ ಅವೀವ್: ಇರಾನ್ (Iran) ಮತ್ತು ಇಸ್ರೇಲ್ (Israel) ನಡುವಿನ ಯುದ್ಧದ ಭೀಕರತೆ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ ಅಮೆರಿಕದ (America) ಎಂಟ್ರಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದ್ದು, ಮೂರನೇ ಮಹಾಯುದ್ಧಕ್ಕೆ ನಾಂದಿಯಾಗುತ್ತಾ ಎನ್ನುವಂತಾಗಿದೆ.

ಇರಾನ್-ಇಸ್ರೇಲ್ ನಡುವಿನ ಯುದ್ಧದ ಸ್ವರೂಪ ಸದ್ಯಕ್ಕೆ ಬದಲಾಗುವಂತಿಲ್ಲ. ಎರಡು ದೇಶಗಳ ನಡುವಿನ ದಾಳಿ, ಪ್ರತಿದಾಳಿಗಳ ಭೀಕರತೆ ಹೆಚ್ಚಾಗುತ್ತಲೇ ಇದೆ. ಯಾವುದೇ ಕಾರಣಕ್ಕೂ ಎರಡು ರಾಷ್ಟ್ರಗಳು ಹಿಂದೆ ಸರಿಯಲ್ಲ ಎಂದು ಪಟ್ಟು ಹಿಡಿದಿವೆ. ಇದೆಲ್ಲದರ ನಡುವೆ ಅಮೆರಿಕದ ನಡೆ ಮತ್ತಷ್ಟು ಟೆನ್ಷನ್‌ಗೆ ಕಾರಣವಾಗಿದೆ.ಇದನ್ನೂ ಓದಿ: ಟ್ರ್ಯಾಕ್ಟರ್ ಕದ್ದು ಜೈಲು ಸೇರಿದ್ರು, ರಿಲೀಸ್ ಆಗಿ ಕಾರು ಕಳ್ಳತನಕ್ಕಿಳಿದ್ರು – ಮತ್ತೆ ಪೊಲೀಸರ ಅತಿಥಿಗಳಾದ ಕಳ್ರು!

Iran Israel america 3

ಇಷ್ಟು ದಿನ ಇಸ್ರೇಲ್ ಬೆನ್ನಿಗೆ ನಿಂತು ಬಲ ನೀಡಿದ್ದ ಅಮೆರಿಕ, ಈಗ ಒಂದು ಹೆಜ್ಜೆ ಮುಂದೆ ಬಂದು ನೇರವಾಗಿಯೇ ಇರಾನ್‌ಗೆ ಹೋರಾಟದ ಎಚ್ಚರಿಕೆ ನೀಡಿದೆ. ಇದು ಮೂರನೇ ಮಹಾಯುದ್ಧಕ್ಕೆ ನಾಂದಿಯಾಗುತ್ತಾ ಎನ್ನುವ ಟೆನ್ಷನ್ ಹೆಚ್ಚಿಸಿದೆ. ಈ ಮಧ್ಯೆ ಟ್ರಂಪ್‌ನ ಆ ಒಂದು ಹೇಳಿಕೆ ಮೂರನೇ ಮಹಾಯುದ್ಧ ಶುರುವಾದರೂ ಅಚ್ಚರಿಪಡಬೇಕಿಲ್ಲ ಎನ್ನುವ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

ಇರಾನ್‌ಗೆ ಎರಡು ದಿನದ ಹಿಂದಷ್ಟೇ ಟ್ರಂಪ್ ನೇರ ಎಚ್ಚರಿಕೆ ನೀಡುವ ಮೂಲಕ ಹಿಂದೆ ಸರಿಯುವಂತೆ ಹೇಳಿದ್ದರು. ಆದರೆ ಇದಕ್ಕೆ ಬಗ್ಗದ ಇರಾನ್ ಸರ್ವೋಚ್ಛ ನಾಯಕ ಖಮೇನಿ ನೀವು ಕೂಡ ನಿಮ್ಮ ಪಾಡಿಗೆ ಸೈಲೆಂಟ್ ಆಗಿದ್ರೆ ಒಳ್ಳೆಯದು, ಇಲ್ಲದಿದ್ದರೆ ಅಮೆರಿಕ ಕೂಡ ಪರಿಣಾಮ ಎದುರಿಬೇಕಾಗುತ್ತದೆ ಎಂದು ವಾರ್ನಿಂಗ್ ನೀಡಿದೆ. ಅದಾದ ಬೆನ್ನಲ್ಲೇ ನಿನ್ನೆ ಮತ್ತೆ ಇರಾನ್ ವಿರುದ್ಧ ಟ್ರಂಪ್ ಗುಡುಗಿದರು. ತಾವು ಕೂಡ ಇರಾನ್ ವಿರುದ್ಧ ಸಮರಕ್ಕಿಳಿಯುವ ಮುನ್ಸೂಚನೆ ನೀಡಿದರು. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ಟ್ರಂಪ್ ಬಳಿ ಕೇಳಿದಾಗ ಯಾವುದೇ ಷರತ್ತುಗಳಿಲ್ಲದೆ ಇರಾನ್ ತನ್ನ ಪರಮಾಣು ಯೋಜನೆಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದು ವಾರ್ನಿಂಗ್ ಕೊಟ್ಟಿದ್ದಾರೆ.ಇದನ್ನೂ ಓದಿ: Rain Alert | ಕರ್ನಾಟಕದ ಕರಾವಳಿಯಲ್ಲಿ ಜೂನ್‌ 26ರ ವರೆಗೂ ಭಾರೀ ಮಳೆ

Iran Israel america 1

ಟ್ರಂಪ್ ಹೇಳಿಕೆ ಬೆನ್ನಲ್ಲೇ ಅಮೆರಿಕವು ಮಧ್ಯಪ್ರಾಚ್ಯಕ್ಕೆ ಹೆಚ್ಚಿನ ಮಿಲಿಟರಿ ಪಡೆಗಳನ್ನು ಸ್ಥಳಾಂತರಿಸುತ್ತಿದೆ. ಮೂರನೇ ನೌಕಾ ವಿಧ್ವಂಸಕ ನೌಕೆ ಪೂರ್ವ ಮೆಡಿಟರೇನಿಯನ್ ಸಮುದ್ರವನ್ನು ಪ್ರವೇಶಿಸಿದೆ. ಮತ್ತೊಂದು ವಿಮಾನವಾಹನ ನೌಕೆ ಗುಂಪು ಅರೇಬಿಯನ್ ಸಮುದ್ರಕ್ಕೆ ತೆರಳುತ್ತಿದೆ ಎನ್ನಲಾಗ್ತಿದೆ. ಇದು ಕೇವಲ ರಕ್ಷಣಾತ್ಮಕ ಕ್ರಮವಾಗಿದೆ ಎಂಬ ಚರ್ಚೆ ಇದೆ. ಇರಾನ್ ಇಸ್ರೇಲ್ ಮೇಲೆ ಬಹುದೊಡ್ಡ ದಾಳಿ ನಡೆಸಿದರೆ ಅಮೆರಿಕ ರಣರಂಗಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ

ಅಮೆರಿಕದ ಎಚ್ಚರಿಕೆ ನಡುವೆ ಈಗ, ರಷ್ಯಾ (Russia) ಕೂಡ ಎಂಟ್ರಿ ಕೊಟ್ಟಿದ್ದು, ಅಮೆರಿಕಾಕ್ಕೆ ಸೈಲೆಂಟಾಗಿರುವಂತೆ ವಾರ್ನಿಂಗ್ ಕೊಟ್ಟಿದೆ. ಈ ಮೂಲಕ ಆಯಾ ದೇಶಗಳ ಪರ ಒಂದೊಂದೆ ದೇಶಗಳು ಎಂಟ್ರಿ ಆರಂಭವಾದಂತಿದ್ದು, ಒಂದೊಮ್ಮೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಇಡೀ ಪ್ರಪಂಚ ಮತ್ತೆ ಮತ್ತೊಂದು ಮಹಾಯುದ್ಧದ ಭೀಕರತೆಗೆ ಸಿಲುಕಲಿದೆ.ಇದನ್ನೂ ಓದಿ: ಇಂದಿನಿಂದ ಭಾರತ-ಇಂಗ್ಲೆಂಡ್‌ ಟೆಸ್ಟ್‌ – ಗಿಲ್‌ ನಾಯಕತ್ವಕ್ಕೆ ಅಗ್ನಿ ಪರೀಕ್ಷೆ

Share This Article