ಇಸ್ಲಾಮಾಬಾದ್: ನೆರೆಯ ಪಾಕಿಸ್ತಾನದಲ್ಲಿ (Pakistan) ಇತ್ತೀಚೆಗೆ ಭಾರೀ ಪ್ರವಾಹ (Flood) ಉಂಟಾಗಿದ್ದು, ಅಲ್ಲಿನ ಜನತೆ ಪ್ರವಾಹಕ್ಕೆ ಹೈರಾಣಾಗಿದೆ. ಪ್ರವಾಹದಿಂದಾಗಿ ಇದೀಗ ಪಾಕಿಸ್ತಾನದಲ್ಲಿ ಸೊಳ್ಳೆಗಳ (Mosquito) ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗದ ಭೀತಿ ಹುಟ್ಟಿಕೊಂಡಿದೆ. ಈ ಹಿನ್ನೆಲೆ ಪಾಕಿಸ್ತಾನ ರೋಗದಿಂದ ತಪ್ಪಿಸಿಕೊಳ್ಳಲು 60 ಲಕ್ಷ ಸೊಳ್ಳೆ ಪರದೆಗಳನ್ನು (Mosquito nets) ಕಳುಹಿಸಿಕೊಡುವಂತೆ ಭಾರತಕ್ಕೆ (India) ಮನವಿ ಮಾಡಿಕೊಂಡಿದೆ.
Advertisement
ದೇಶದ 32 ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಮಲೇರಿಯಾ ವೇಗವಾಗಿ ಹರಡುತ್ತಿದೆ. ಅಲ್ಲಿ ಸಾವಿರಾರು ಮಕ್ಕಳು ಸೊಳ್ಳೆಯಿಂದ ಹರಡುವ ರೋಗಗಳಿಗೆ ತುತ್ತಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಲೇರಿಯಾ ಕಾಣಿಸಿಕೊಂಡಿದ್ದು, ಈ ಹಿನ್ನೆಲೆ ಸೊಳ್ಳೆ ಪರದೆಗಳನ್ನು ಕಳುಹಿಸಲು ಭಾರತಕ್ಕೆ ಮನವಿ ಮಾಡಲು ಆರೋಗ್ಯ ಸಚಿವಾಲಯವನ್ನು ಕೇಳಿಕೊಂಡಿದ್ದೇವೆ. ಇದಕ್ಕೆ ಒಪ್ಪಿಗೆ ದೊರಕಿರುವುದಾಗಿ ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನಷ್ಟ ಸರಿದೂಗಿಸಲು ತೈಲ ಕಂಪನಿಗಳಿಗೆ 22 ಸಾವಿರ ಕೋಟಿ ರೂ. ಅನುದಾನ
Advertisement
Advertisement
ಪಾಕಿಸ್ತಾನದಲ್ಲಿ ಪ್ರವಾಹ ಪೀಡಿತರಿಗೆ ಭಾರತದಿಂದ ಸೊಳ್ಳೆ ಪರದೆಗಳನ್ನು ಪಡೆಯಲು ಜಾಗತಿಕ ನಿಧಿಯು ವಿಶ್ವ ಆರೋಗ್ಯ ಸಂಸ್ಥೆಗೆ (WHO) ಹಣಕಾಸಿನ ಸಂಪನ್ಮೂಲವನ್ನು ಒದಗಿಸುತ್ತಿದೆ. ಪಾಕಿಸ್ತಾನದ ಅಧಿಕಾರಿಗಳು ಆದಷ್ಟು ಬೇಗ ಸೊಳ್ಳೆ ಪರದೆಗಳನ್ನು ಪಡೆಯಲು ಯೋಜಿಸುತ್ತಿದ್ದಾರೆ. ಅದು ವಾಘಾ ಮಾರ್ಗದ ಮೂಲಕ ನವೆಂಬರ್ ಮಧ್ಯದ ವೇಳೆಗೆ ಪಾಕಿಸ್ತಾನಕ್ಕೆ ಬರುವ ಭರವಸೆ ಇದೆ ಎಂದು ಹೇಳಿದರು. ಇದನ್ನೂ ಓದಿ: ನೌಕಾನೆಲೆಯ ಲೇಬರ್ ಕಾಲೋನಿಯಲ್ಲಿ ಸಿಲಿಂಡರ್ ಸ್ಫೋಟ – ತಪ್ಪಿದ ಅನಾಹುತ
Advertisement
ಪಾಕಿಸ್ತಾನದಲ್ಲಿ ಕಳೆದ ತಿಂಗಳು ಉಂಟಾದ ಭಾರೀ ಪ್ರವಾಹದಿಂದ 1,600 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯೂ ಪಾಕಿಸ್ತಾನದಲ್ಲಿ ಉಂಟಾಗಬಹುದಾದಂತಹ ಸಾಂಕ್ರಾಮಿಕ ರೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.