ಮಂಡ್ಯ: ನಾಗಮಂಗಲದಲ್ಲಿ (Nagamangala) ಇಂದು ಶಾಂತಿ ಸಭೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಈ ಸಭೆಗೆ ಮಾಧ್ಯಮಗಳನ್ನ (Media) ನಿರ್ಬಂಧಿಸಲು ಪ್ಲ್ಯಾನ್ ಮಾಡಲಾಗಿದೆ. ಈ ಮೂಲಕ ಓಲೈಕೆ ರಾಜಕಾರಣಕ್ಕೆ ಸರ್ಕಾರ ಮುಂದಾಗಿದ್ಯಾ ಎಂಬ ಪ್ರಶ್ನೆ ಎದ್ದಿದೆ.
ಜಿಲ್ಲಾಡಳಿತ, ಉಸ್ತುವಾರಿ ಸಚಿವರ ಈ ನಡೆ ಮತ್ತೆ ಅನುಮಾನಕ್ಕೆ ಕಾರಣವಾಗಿದೆ. ಸಭೆಯಲ್ಲಿ ವಸ್ತು ಸ್ಥಿತಿ ಬಯಲಾಗಬಹುದು ಎಂಬ ಭಯಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಲು ಜಿಲ್ಲಾಡಳಿತ ಮುಂದಾಗಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ನಾಗಮಂಗಲ ಕೋಮು ಗಲಭೆ ತಡೆಯೋ ಅವಕಾಶವಿದ್ರೂ ವಿಫಲವಾದ ಇಲಾಖೆಗಳು
ಯಾಕೆ ನಿರ್ಬಂಧ?
ಗುರುವಾರ ನಾಗಮಂಗಲಕ್ಕೆ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ (Chaluvaraya Swamy) ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಬಂಧಿತರ ಕುಟುಂಬಸ್ಥರು ಚಲುವರಾಯಸ್ವಾಮಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದರು. ಕಲ್ಲು, ಪೆಟ್ರೋಲ್ ಬಾಂಬ್ ಎಸೆದವರನ್ನು ಬಂಧಿಸಿಲ್ಲ. ತಪ್ಪನ್ನೇ ಮಾಡದ ಅಮಾಯಕರನ್ನು ಯಾಕೆ ಬಂಧಿಸಿದ್ದೀರಿ? ಇಷ್ಟೊಂದು ಒಲೈಕೆ ರಾಜಕರಾಣ ಯಾಕೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಜನರು ಪ್ರಶ್ನೆಗಳಿಗೆ ಉತ್ತರ ನೀಡಲು ವಿಫಲರಾದ ಚಲುವರಾಯಸ್ವಾಮಿಗೆ ಭಾರೀ ಮುಜುಗರವಾಗಿತ್ತು.
ಇಂದು ನಡೆಯುವ ಸಭೆಯಲ್ಲಿ ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಜನರು ಮತ್ತೆ ತರಾಟೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಬಂಧಿತ ಕುಟುಂಬಸ್ಥರು ಸಹ ಸಚಿವರ ವಿರುದ್ದ ಆಕ್ರೋಶ ವ್ಯಕ್ತಪಡಿಸುವುದು ಖಚಿತ. ಆ ಮುಜುಗರ ತಪ್ಪಿಸಿಕೊಳ್ಳಲು ಮಾಧ್ಯಮಗಳನ್ನ ಸಭೆಯಿಂದ ದೂರ ಇಡಲು ಚಲುವರಾಯಸ್ವಾಮಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.