ಈ ವರ್ಷ ಚಿತ್ರೋದ್ಯಮದ ಮತ್ತೊಂದು ದಾಖಲೆಯ ವಾರಕ್ಕೆ ಸಿದ್ಧವಾಗುತ್ತಿದೆ. ಕರ್ನಾಟಕದಲ್ಲಿ ಈ ವಾರ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿ ಬರೋಬ್ಬರಿ 20ಕ್ಕೂ ಹೆಚ್ಚು ಚಿತ್ರಗಳು (Movie) ಬಿಡುಗಡೆ ಆಗುತ್ತಿವೆ. ಕನ್ನಡದಲ್ಲೇ ಆರು ಚಿತ್ರಗಳು ಈ ಶುಕ್ರವಾರ ತೆರೆ ಕಾಣುತ್ತಿವೆ. ಲೂಸ್ ಮಾದ ಯೋಗಿ, ಡಾಲಿ ಧನಂಜಯ್ ಸಿನಿಮಾಗಳು ಇದರಲ್ಲಿ ಸೇರಿವೆ. ವರ್ಷಾಂತ್ಯಕ್ಕೆ ಈ ಪ್ರಮಾಣದಲ್ಲಿ ಸಿನಿಮಾಗಳು ರಿಲೀಸ್ ಆಗುತ್ತಿರುವುದು ನಿಜಕ್ಕೂ ಅಭಿಮಾನಿಗಳ ಪಾಲಿಗೆ ಸಂಭ್ರಮವೋ ಸಂಕಟವೋ ಗೊಂದಲವಾಗಿದೆ.
Advertisement
ಡಾಲಿ ಧನಂಜಯ್ (Dhananjay) ನಟನೆಯ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’, ಲೂಸ್ ಮಾದ ಯೋಗೀಶ್ (Yogi) ನಟನೆಯ ‘ನಾನು ಮತ್ತು ಸರೋಜ’, ಯೋಗರಾಜ್ ಭಟ್ ಅವರ ಬ್ಯಾನರ್ ನಿಂದ ತಯಾರಾದ ‘ಪದವಿ ಪೂರ್ವ’, ಹೊಸ ತಂಡದ ‘ಮೇಡ್ ಇನ್ ಇಂಡಿಯಾ’, ‘ಜೋರ್ಡನ್’, ‘ದ್ವಿಪಾತ್ರ’ ಚಿತ್ರಗಳು ಈ ವಾರ ತೆರೆಗೆ ಬರಲು ಸಿದ್ಧವಾಗಿವೆ. ಈ ಕನ್ನಡ ಚಿತ್ರಗಳು ಈ ವಾರ ಬಿಡುಗಡೆ ಆಗುತ್ತಿರುವ ಇತರ ಭಾಷೆಯ ಚಿತ್ರಗಳ ಜೊತೆ ಪೈಪೋಟಿಗೆ ಇಳಿಯಲಿವೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಅರವಿಂದ್‌ಗಾಗಿ ಬೇಡಿಕೆಯಿಟ್ಟ ದಿವ್ಯಾ ಉರುಡುಗ
Advertisement
Advertisement
ಸ್ಟಾರ್ ನಟ ನಟಿಯರ ಚಿತ್ರಗಳಾದ ತಮಿಳಿನ ಖ್ಯಾತ ನಟಿ ತ್ರಿಶಾ (Trisha) ನಟನೆಯ ‘ರಾಂಗಿ’, ಐಶ್ವರ್ಯ ರಾಜೇಶ್ ನಟನೆಯ ‘ದ ಗ್ರೇಟ್ ಇಂಡಿಯನ್ ಕಿಚನ್, ಬಾಲಿವುಡ್ ನ ವೇದ್, ಟಾಲಿವುಡ್ ನ ಆದಿ ಸಾಯಿಕುಮಾರ್ ನಟನೆಯ ‘ಟಾಪ್ ಗೇರ್’, ಧನಂಜಯ್ ನಟನೆಯ ತೆಲುಗು ಅವತರಣಿಕೆ ‘ಒನ್ಸ್ ಅಪಾನ್ ಎ ಟೈಮ್ ಇನ್ ದೇವರಕೊಂಡ’ ಹೀಗೆ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳು ಈ ವಾರ ಕರ್ನಾಟಕದಲ್ಲಿ ಬಿಡುಗಡೆ (Release) ಆಗುತ್ತಿವೆ.
Advertisement
ಈಗಾಗಲೇ ರಿಲೀಸ್ ಆಗಿರುವ ಶಿವರಾಜ್ ಕುಮಾರ್ ನಟನೆಯ ವೇದ ಚಿತ್ರ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡುತ್ತಿವೆ. ಕಳೆದ ಕೆಲ ವಾರಗಳಿಂದ ರಿಲೀಸ್ ಆಗಿರುವ ಹಲವು ಚಿತ್ರಗಳು ಥಿಯೇಟರ್ ನಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿವೆ. ಹಾಗಾಗಿ ಈ ಪ್ರಮಾಣದ ಸಂಖ್ಯೆಯ ಚಿತ್ರಗಳು ಥಿಯೇಟರ್ ಎಲ್ಲಿಂದ ತರೋದು ಎನ್ನುವುದು ವಿತರಕರ ತಲೆನೋವು ಆಗಿದೆ. ಸಿಕ್ಕಷ್ಟು ಚಿತ್ರಮಂದಿರಗಳಲ್ಲಿ ನಿರ್ಮಾಪಕ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಿ, ಹೊಸ ವರ್ಷವನ್ನು ಸ್ವಾಗತಿಸುತ್ತಿದ್ದಾರೆ.