ಯಾದಗಿರಿ: ರಾಜ್ಯದಲ್ಲಿ FDA ಪರೀಕ್ಷೆಯ ಅಕ್ರಮ ನಡೆದು ಐದು ದಿನಗಳು ಕಳೆದಿದ್ರೂ, ಪ್ರಕರಣದ ಪ್ರಮುಖ ಆರೋಪಿಗಳು ಮಾತ್ರ ಪತ್ತೆಯಾಗಿಲ್ಲ. ಹೀಗಾಗಿ ಅಲರ್ಟ್ ಆಗಿರೋ ಪೊಲೀಸರು ಬಂಧಿತ 16 ಆರೋಪಿಗಳನ್ನ ಕಸ್ಟಡಿಗೆ ಪಡೆದಿದ್ದಾರೆ. ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ಯಾರು? ಪ್ರಶ್ನೆ ಪತ್ರಿಕೆ ಹೇಗ್ ಸಿಕ್ತು ಅನ್ನೋ ವಿಚಾರಗಳನ್ನ ಆರೋಪಿಗಳಿಂದ ಬಾಯಿ ಬಿಡಿಸಲಿದ್ದಾರೆ.
ಅಕ್ಟೋಬರ್ 28ರಂದು ರಾಜ್ಯದಲ್ಲಿ ನಡೆದ ಕೆಇಎ ನ ಎಫ್‍ಡಿಎ ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಬಳಸಿ ಅಕ್ರಮವಾಗಿ ಪರೀಕ್ಷೆ ಬರೆಯಲು ಹೋಗಿ ಯಾದಗಿರಿ ಹಾಗೂ ಕಲಬುರ್ಗಿ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಆರೋಪಿಗಳು ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾರೆ. ಆದ್ರೆ ಪ್ರಕರಣದಲ್ಲಿ ಇಡೀ ಘಟನೆಗೆ ಪ್ಲಾನ್ ಮಾಡಿದ್ದು ಯಾರು? ಹಣ ಯಾರು ಪಡೆದುಕೊಂಡ್ರು? ಎಷ್ಟೆಷ್ಟು ಹಣ ಕೊಟ್ರು? ಅನ್ನೋ ಮಾಹಿತಿ ಪಡೆಯಲು ಯಾದಗಿರಿ ಪೊಲೀಸರು ಮುಂದಾಗಿದ್ದಾರೆ. ಬಂಧಿತ ಆರೋಪಿಗಳು ಈಗಾಗಲೇ ಎಲ್ಲದಕ್ಕೂ ಕಾರಣ ಆರ್ ಡಿ ಪಾಟೀಲನೇ ಅಂತಾ ಬಾಯ್ಬಿಟ್ಟಿದ್ದಾರೆ. ಆದರೂ ಯಾವುದೇ ಟೆಕ್ನಿಕಲ್ ಎವಿಡೆನ್ಸ್ ಸಿಗ್ತಿಲ್ಲ. ಯಾಕಂದ್ರೆ ಚಾಲಾಕಿ ಆರ್ ಡಿ ಪಾಟೀಲ್ ಆ ರೀತಿ ಪ್ಲಾನ್ ಮಾಡಿ, ತನ್ನ ಪಾತ್ರ ಎಲ್ಲೂ ಇಲ್ಲ ಇನ್ನುವಂತೆ ಬಿಂಬಿಸಿಕೊಳ್ಳಲು ಕೋಟೆ ಕಟ್ಟಿಕೊಂಡಿದ್ದ. ಇದೀಗ ಆ ಕೋಟೆಗೆ ಕೈ ಹಾಕಿರೋ ಪೊಲೀಸರು ಬಂಧಿತ ಆರೋಪಿಗಳಿಗೆ ಡ್ರಿಲ್ ನಡೆಸಲಿದ್ದಾರೆ. ಇದನ್ನೂ ಓದಿ: ಪಾಕ್ ವಾಯುನೆಲೆ ಮೇಲೆ ಆತ್ಮಹತ್ಯಾ ಬಾಂಬರ್‌ಗಳ ದಾಳಿ – ಮೂವರು ಉಗ್ರರ ಹತ್ಯೆ
ಎಫ್‍ಡಿಎ ಅಕ್ರಮ ಪರೀಕ್ಷೆಯ ದಂಧೆಕೋರರ ಬೆನ್ನು ಬಿದ್ದಿರೋ ಯಾದಗಿರಿ ಪೊಲೀಸರು, ಪ್ರಕರಣ ಕಿಂಗ್ ಪಿನ್, ಮಾಸ್ಟರ್ ಮೈಂಡ್ ಆರ್ ಡಿ ಪಾಟೀಲ್‍ನ ಪಾತ್ರದ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ. ಯಾದಗಿರಿ ಜಿಲ್ಲೆಯೊಂದರಲ್ಲೇ ಈಗಾಗಲೇ 16 ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಲ್ಲಿ ಆರ್ ಡಿ ಪಾಟೀಲ್‍ನ ಸ್ವಗ್ರಾಮದ ಅಫಜಲಪುರದ ಸೊನ್ನದವರೇ 3 ಜನ ಜನರಿದ್ದು, ಅದರಲ್ಲಿ ಇಬ್ಬರು ಆತನ ಹತ್ತಿರದ ಸಂಬಂಧಿಕರಾಗಿದ್ದಾರೆ. ಹೀಗಾಗಿ ಮತ್ತೇ ಕಸ್ಟಡಿಗೆ ತಗೊಂಡಿರೋ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕಸ್ಟಡಿಗೆ ಪಡೆದು ಒಬ್ಬೊಬ್ಬರನ್ನೇ ಡ್ರಿಲ್ ಮಾಡುವ ಪೊಲೀಸರು ಎಲ್ಲಾ ಸಂಪೂರ್ಣ ವಿವರ ಪಡೆಯಲಿದ್ದಾರೆ. ಈಗಾಗಲೇ ಆರಂಭದಲ್ಲಿ ಒಂದು ಹಂತದ ಡ್ರಿಲ್ ಮಾಡಿದ್ದ ಪೊಲೀಸರು ಅವಾಗ್ಲೇ ಸಾಕಷ್ಟು ವಿಷಯ ಬಾಯಿಬಿಡಿಸಿದ್ರು. ಅದರಂತೆ ಈಗಾಗಲೇ ಪೊಲೀಸರು ಆರ್ ಡಿ ಪಾಟೀಲ್‍ನನ್ನ ವಿಚಾರಣೆಗಾಗಿ ಎತ್ತಾಕ್ಕೊಂಡು ಬರೋದಕ್ಕೆ ಪ್ಲಾನ್ ಮಾಡುತ್ತಿದ್ದಾರೆ.
ಸದ್ಯ ಯಾದಗಿರಿ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ಪ್ರಕರಣದಲ್ಲಿ ಯಾರು ಯಾರ ಪಾತ್ರ ಏನೇನಿತ್ತು ಅನ್ನೋ ಆಯಾಮಗಳಲ್ಲಿ ತನಿಖೆ ಶುರು ಮಾಡಿದ್ದಾರೆ. ಪೊಲೀಸರ ಈ ತನಿಖೆಯಿಂದ ಈಗಾಗಲೇ ಪ್ರಮುಖ ಆರೋಪಿಗಳಲ್ಲಿ ನಡುಕವೂ ಶುರುವಾಗಿದೆ. ಹೀಗಾಗಿ ಯಾರೆಲ್ಲಾ ಈ ಪ್ರಕರಣದಲ್ಲಿ ಲಾಕ್ ಆಗ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
Web Stories