ವಾಷಿಂಗ್ಟನ್: ಮಾನವನ ದೇಹವನ್ನು ಪ್ರವೇಶಿದ ನಂತರ ಮಾತ್ರೆಯೇ ಸ್ವತಃ ತನ್ನ ಮಾಹಿತಿಯನ್ನು ಒದಗಿಸುವ ವಿಶಿಷ್ಟ ತಂತ್ರಜ್ಞಾನದ ಡಿಜಿಟಲ್ ಮಾತ್ರೆಗೆ ಅಮೆರಿಕ ಸರ್ಕಾರ ಅನುಮತಿಯನ್ನು ನೀಡಿದೆ. ಒಟುಕ್ಸಾ ಫಾರ್ಮಸುಟಿಕಲ್ಸ್ ಸಂಸ್ಥೆ ಸಿದ್ಧಪಡಿಸಿರುವ ಮಾತ್ರೆಗೆ ಅಮೆರಿಕದ ಆಹಾರ ಮತ್ತು ಔಷಧ ಇಲಾಖೆ ಅನುಮತಿ ನೀಡಿದೆ.
Advertisement
ಏನಿದು ಡಿಜಿಟಲ್ ಮಾತ್ರೆ: ವೈದ್ಯರು ರೋಗಿಗಳಿಗೆ ನೀಡುವ ಎಲ್ಲಾ ಮಾತ್ರೆಗಳಂತೆ ಇದು ಸಹ ಸಾಮಾನ್ಯ ಮಾದರಿಯ ಮಾತ್ರೆಯಾಗಿದ್ದು, ಆದರೆ ಇದರಲ್ಲಿ ಸಿಲಿಕಾ, ಮ್ಯಾಗ್ನೇಷಿಯಂ, ತಾಮ್ರದಿಂದ ತಯಾರಿಸಿದ ಸಣ್ಣ ಚೀಪ್ ಅಳವಡಿಸಲಾಗಿರುತ್ತದೆ. ರೋಗಿ ಮಾತ್ರೆ ಸೇವಿಸಿದ ನಂತರ ಮಾತ್ರೆ ಸೇವಿಸಿದ ಸಮಯ, ಪ್ರಮಾಣ ಕುರಿತ ಎಲ್ಲಾ ಅಂಶಗಳ ಮಾಹಿತಿಯನ್ನು ನೀಡುತ್ತದೆ. ಅಲ್ಲದೇ ಮಾತ್ರೆ ಸೇವಿಸಿದ ನಂತರ ಚಿಪ್ ರೋಗಿಯ ಮಲದ ಮೂಲಕ ಹೊರ ಬರುತ್ತದೆ.
Advertisement
Advertisement
ಉಪಯೋಗ ಏನು? ಮಾತ್ರೆ ರೋಗಿಯ ಹೊಟ್ಟೆ ಸೇರಿಸಿದ ನಂತರ ಯಾವ ಪ್ರಮಾಣದಲ್ಲಿ ಔಷಧಿಯನ್ನು ಬಳಸಲಾಗಿದೆ ಎಂಬ ಮಾಹಿತಿ ಸುಲಭವಾಗಿ ಲಭ್ಯವಾಗುತ್ತದೆ. ಈ ಮಾಹಿತಿ ಲಭಿಸಲು ಕನಿಷ್ಟ ಮಾತ್ರೆ ಸೇವಿಸಿದ ನಂತರ 30 ನಿಮಿಷಗಳಿಂದ ರಿಂದ 2 ಗಂಟೆಗಳ ಅವಧಿ ಬೇಕಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
Advertisement
ಕಾರ್ಯನಿರ್ವಹಣೆ ಹೇಗೆ?
ರೋಗಿಯು ಮಾತ್ರೆ ಸೇವಿಸಿದ ನಂತರ ಹೊಟ್ಟೆಯೊಳಗಿನ ಆಮ್ಲದೊಂದಿಗೆ ಸಮ್ಮಿಲಗೊಂಡು ಪ್ರತಿಕ್ರಿಯೆ ನೀಡುತ್ತದೆ. ಮಾತ್ರೆಯಲ್ಲಿ ಅಳವಡಿಸಲಾಗರುವ ಸಣ್ಣ ಗಾತ್ರದ ಚಿಪ್ ರೋಗಿಯ ಕೈಗೆ ಅಳವಡಿಸುವ ಯಂತ್ರಕ್ಕೆ ಮಾಹಿತಿ ರವಾನಿಸುತ್ತದೆ. ನಂತರ ಈ ಮಾಹಿತಿಯನ್ನು ರೋಗಿಯ ಮೊಬೈಲ್, ಡಾಕ್ಟರ್ ಅಥವಾ ಸಂಬಂಧಿಕರ ಮೊಬೈಲ್‍ಗೆ ರವಾನೆಯಾಗುತ್ತದೆ. ಇದರಿಂದ ರೋಗಿ ಔಷಧಿ ಸೇವಿಸಿದ್ದಾರ, ಇಲ್ಲವೇ ಎಂಬ ಮಾಹಿತಿ ಸುಲಭವಾಗಿ ಲಭ್ಯವಾಗುತ್ತದೆ.
ಪ್ರಸ್ತುತ ಡಿಜಿಟಲ್ ಮಾತ್ರೆಗಳನ್ನು ಮಾನಸಿಕ ಸಮಸ್ಯೆ ಹಾಗೂ ಖಿನ್ನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಬಳಸಲು ಅನುಮತಿ ನೀಡಲಾಗಿಲ್ಲ.