Dakshina KannadaDistrictsKarnatakaLatestLeading NewsMain Post

ಫಾಝಿಲ್ ಹತ್ಯೆ ಪ್ರಕರಣ – ನಾಲ್ವರು ಹಂತಕರು ಅರೆಸ್ಟ್

Advertisements

ಮಂಗಳೂರು: ಸುರತ್ಕಲ್‍ನಲ್ಲಿ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಹಂತಕರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಬೆಂಗಳೂರು, ಉತ್ತರ ಕನ್ನಡ ಸೇರಿದಂತೆ ವಿವಿಧ ಕಡೆ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರು ಹಂತಕರನ್ನು ಸೋಮವಾರ ರಾತ್ರಿ ಬಂಧಿಸಿ ಸುರತ್ಕಲ್ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಇಂದು ಆರೋಪಿಗಳನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಮತ್ತು ಆರೋಪಿಗಳ ಹೆಸರನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಅಕ್ರಮ ಸಂಬಂಧ ಹೊಂದುವಂತೆ ಪತ್ನಿಗೆ ಬ್ಲಾಕ್‍ಮೇಲ್ – ಪೊಲೀಸಪ್ಪನ ಮೂಗು, ಕಿವಿ, ತುಟಿ ಕಟ್

ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರೌಡಿಶೀಟರ್ ಸುಹಾಸ್ ಸೇರಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅದರಲ್ಲಿಯೂ ಮೂವರು ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಯುವಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಫಾಝಿಲ್ ಹತ್ಯೆ ನಂತರ ಮಂಗಳೂರು ಸಿಟಿ ಹೊರವಲಯದ ಕಾರ್ಕಾಳದಲ್ಲಿ ಕಾರನ್ನು ಬಿಟ್ಟು ಆರೋಪಿಗಳು ಎಸ್ಕೇಪ್ ಆಗಿದ್ದರು. ಆರೋಪಿಗಳ ಜಾಡು ಬೆನ್ನು ಹತ್ತಿದ್ದ ಮಂಗಳೂರು ಪೊಲೀಸರಿಗೆ ಆರೋಪಿಗಳು ಇರುವ ಸ್ಥಳದ ಬಗ್ಗೆ ಮಾಹಿತಿ ದೊರೆತಿತ್ತು. ಇದನ್ನೂ ಓದಿ: ಅಲ್‌ಖೈದಾ ಮುಖ್ಯಸ್ಥ ಝವಾಹಿರಿ ಹತ್ಯೆ- ಮೋಸ್ಟ್ ವಾಂಟೆಡ್ ಉಗ್ರನ ಮೇಲೆ ಡ್ರೋಣ್ ಸ್ಟ್ರೈಕ್‌

ಒಂದು ಸ್ಥಳದಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ನಿಲ್ಲದ ಆರೋಪಿಗಳ ಜಾಡನ್ನು ಪತ್ತೆ ಹಚ್ಚಿದ ಪೊಲೀಸರು, ಸೋಮವಾರ ಸಂಜೆ 6:30ರ ಸರಿ ಸುಮಾರಿಗೆ ಆರೋಪಿಗಳಿದ್ದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆದರೆ ಅಲ್ಲಿಂದಲೂ ಆರೋಪಿಗಳು ಎಸ್ಕೇಪ್ ಆಗಿದ್ದರು. ಬಳಿಕ ಅವರಿಗಾಗಿ ಮತ್ತೆ ಹುಡುಕಾಟ ನಡೆಸಿದ ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ತಂಡ, ಮಿಸ್ ಆಗಿದ್ದ ಸ್ಥಳದಿಂದ 15 ಕಿಲೋ ಮೀಟರ್ ದೂರದಲ್ಲೇ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ಮೂವರು ಆರೋಪಿಗಳನ್ನು ಸುರತ್ಕಲ್‍ಗೆ ಕರೆ ತಂದಿದ್ದಾರೆ.

ಮೂವರು ಆರೋಪಿಗಳ ಜೊತೆ ಇನ್ನಿಬ್ಬರನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇವರೆಲ್ಲರೂ ಕೋಡಿಕೆರೆ ಲೋಕಿ ಗ್ಯಾಂಗ್ ಜೊತೆ ಗುರುತಿಸಿಕೊಂಡಿರುವ ವ್ಯಕ್ತಿಗಳಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Live Tv

Leave a Reply

Your email address will not be published.

Back to top button