ಹುಬ್ಬಳ್ಳಿ: ಫಯಾಜ್ (Fayaz) ನನ್ನ ಮಗಳನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದ ಎಂದು ಮೃತ ವಿದ್ಯಾರ್ಥಿನಿ ನೇಹಾ ಹಿರೇಮಠ (Neha Hiremath) ತಂದೆ ನಿರಂಜನ್ ಹಿರೇಮಠ (Niranjan Hiremath) ಹೇಳಿದ್ದಾರೆ.
ಸಿಐಡಿ ಅಧಿಕಾರಿಗಳ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಸಿಐಡಿ ಅಧಿಕಾರಿಗಳ ಗಮನಕ್ಕೆ ಎಲ್ಲಾ ವಿಷಯ ತಂದಿದ್ದೇನೆ. ಬುಧವಾರ ಫಯಾಜ್ ಮಹಜರು ಮಾಡಿರೋ ವಿಷಯ ಕೂಡಾ ತಿಳಿಸಿದ್ರು. ಕೆಲವು ವಿಷಯ ಬಹಿರಂಗ ಮಾಡೋಕೆ ಆಗಲ್ಲ ಎಂದರು. ಇದನ್ನೂ ಓದಿ: ನೇಹಾ ಕರ್ನಾಟಕದ ಪುತ್ರಿ.. ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು: ಕಾಂಗ್ರೆಸ್‌ನ ರಣದೀಪ್ ಸುರ್ಜೇವಾಲಾ
ಫಯಾಜ್ ನನ್ನ ಮಗಳನ್ನ ಕಿಡ್ನಾಪ್ ಮಾಡಲು ಯತ್ನಿಸಿದ್ದ. ಕೆಲ ದಿನಗಳಿಂದ ಬೆದರಿಕೆ ಇತ್ತು. ಯಾರ್ಯಾರೋ ಬಂದು ವೀಡಿಯೋ ಮಾಡ್ತಿದ್ದಾರೆ. ನನ್ನ ಪತ್ನಿ ಇರುವ ಕೋಣೆಗೆ ಬಂದು ವೀಡಿಯೋ ಮಾಡಿದ್ದಾರೆ, ಇದು ನನಗೆ ಗೊತ್ತಾಗಿ ಬಳಿಕ ಆ ವೀಡಿಯೋ ಡಿಲೀಟ್ ಮಾಡಿಸಿದ್ದೇನೆ ಎಂದು ಹೇಳಿದರು.
ಕೆಲ ದಿನಗಳಿಂದ ಅನಾಮಿಕರು ಇಲ್ಲಿ ಓಡಾಡುತ್ತಿದ್ದಾರೆ. ಕೆಲವರಿಂದ ಭಯ ಆಗುತ್ತಿದೆ. ಇದನ್ನು ನಾನು ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ನಾನು ನನ್ನ ಪ್ರಾಣ ಹೋದರೂ ಪರವಾಗಿಲ್ಲ. ಅವನ ಪ್ರಾಣ ತಗೋತೀನಿ ನನ್ನ ಮಗಳ ಶವದ ಮೇಲೆ ನಾನು ಶಪಥ ಮಾಡಿದ್ದೇನೆ. ಸಿಐಡಿ ಅಧಿಕಾರಿಗಳು ಫಯಾಜ್ ಗೆ ಸಹಾಯ ಮಾಡಿದವರನ್ನು ಅರೆಸ್ಟ್ ಮಾಡಬೇಕು ಎಂದು ನಿರಂಜನ್ ಹಿರೇಮಠ ಆಗ್ರಹಿಸಿದ್ದಾರೆ.