ಕರಾಚಿ: ಪಾಕಿಸ್ತಾನ ಬ್ಯಾಟ್ಸ್ ಮನ್ ಫವಾದ್ ಆಲಂ ವಿರುದ್ಧ ಡ್ರೆಸ್ಸಿಂಗ್ ರೂಮ್ ಗಾಜು ಒಡೆದ ಆರೋಪ ಕೇಳಿ ಬಂದಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ.
ಪಾಕ್ ಕೋಲ್ನೆ ಕ್ರಿಕೆಟ್ ಕ್ಲಬ್ ವಿರುದ್ಧ ನಡೆದ ಪಂದ್ಯದ ವೇಳೆ 32 ವರ್ಷದ ಆಲಂ ಸೂಕ್ತ ಸಮಯದಲ್ಲಿ ಮೈದಾನಕ್ಕೆ ಬಾರದೆ ತಡಮಾಡಿದ್ದರು. ಈ ವೇಳೆ ಫೀಲ್ಡ್ ಅಂಪೈರ್ ಟೈಮ್ ಔಟ್ ಎಂದು ತೀರ್ಮಾನ ನೀಡಿದ್ದರು. ಈ ವೇಳೆ ಡ್ರೆಸ್ಸಿಂಗ್ ರೂಮ್ ನಲ್ಲಿದ್ದ ಆಲಂ ಕಿಟಕಿ ಗಾಜು ಒಡೆದು ತಮ್ಮ ಕೋಪ ಪ್ರದರ್ಶನ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
Advertisement
Advertisement
ಡ್ರೆಸಿಂಗ್ ರೂಮ್ ಗ್ಲಾಸ್ ಒಡೆದ ಕುರಿತು ಮೈದಾನದಲ್ಲಿದ್ದ ಕೆಲ ವಿಕ್ಷಕರು ಫೋಟೋ ಸಮೇತ ಟ್ವೀಟ್ ಮಾಡಿ ಆರೋಪ ಮಾಡಿದ್ದರು. ಇದಾದ ಬಳಿಕ ಘಟನೆಯ ಕುರಿತು ವ್ಯಾಪಕ ಚರ್ಚೆ ನಡೆದಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಲಂ ಡ್ರೆಸ್ಸಿಂಗ್ ರೂಮ್ ಗಾಜು ಒಡೆಯಲು ತಾನು ಕಾರಣನಲ್ಲ. ಇದನ್ನು ಅಂಪೈರ್ ಕೂಡ ಸ್ಪಷ್ಟಪಡಿಸಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ.
Advertisement
ಕ್ರಿಕೆಟಿಗ ಆಲಂ ಪಾಕ್ ನ ಕ್ಲಿಥೆರೊಗ್ ಕ್ರಿಕೆಟ್ ಕ್ಲಬ್ ಭಾಗವಹಿಸುತ್ತಿದ್ದು, ತಂಡದ ವೃತ್ತಿಪರ ಕ್ರಿಕೆಟ್ ಆಗಿ ಗುರುತಿಸಿ ಕೊಂಡಿದ್ದರು. 2017 ರಲ್ಲಿ ನಡೆದ ಟೂರ್ನಿಯ ವೇಳೆಯೂ ಉತ್ತಮ ಪ್ರದರ್ಶನ ನೀಡಿದ್ದರು.
Advertisement
ಘಟನೆಯ ಬಳಿಕ ಪ್ರತಿಕ್ರಿಯೆ ನೀಡಿರುವ ಪಾಕ್ ಆಯ್ಕೆ ಸಮಿತಿ ಮುಖ್ಯಸ್ಥರು, ರಾಷ್ಟ್ರೀಯ ತಂಡಕ್ಕೆ ಆಲಂ ಗಿಂತಲೂ 25 ವರ್ಷದ ಯುವ ಆಟಗಾರ ಉಸ್ಮಾನ್ ಸಲಾಹದ್ದೀನ್ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಪಂದ್ಯಗಳಿಗೆ ಉತ್ತಮ ಆಯ್ಕೆ ಎಂದು ತಿಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಉಸ್ಮಾನ್ ಟೆಸ್ಟ್ ಕ್ಯಾಪ್ ಧರಿಸಿದ್ದರು. ಆದರೆ ಈ ಪಂದ್ಯದಲ್ಲಿ ಕೇವಲ 4 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದರು.