ಬಾಲಿವುಡ್ ನ (Bollywood) ಹೆಸರಾಂತ ನಿರ್ದೇಶಕ (Directo) ಪ್ರದೀಪ್ ಸರ್ಕಾರ್ (Pradeep Sarkar) ಇಂದು ಬೆಳಗ್ಗೆ 3.30ಕ್ಕೆ ನಿಧನರಾಗಿದ್ದಾರೆ (Passes Away). ದೀರ್ಘಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು, ಹಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದ ಕಾರಣ ಇಹಲೋಕ ತ್ಯಜಿಸಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಅವರ ಮುಂಬೈ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ. ಪ್ರದೀಪ್ ಸರ್ಕಾರ್ ನಿಧನಕ್ಕೆ ಬಾಲಿವುಡ್ ನ ಅಜಯ್ ದೇವಗನ್ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದು, ಅಪರೂಪದ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಎಂದು ಕೊಂಡಾಡಿದ್ದಾರೆ. ಅಲ್ಲದೇ, ಸೋಷಿಯಲ್ ಮೀಡಿಯಾ ಮೂಲಕವೂ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ವಿದ್ಯಾ ಬಾಲನ್, ಸೈಫ್ ಅಲಿಖಾನ್ ಮತ್ತು ಸಂಜಯ್ ದತ್ ಕಾಂಬಿನೇಷನ್ ನ ಪರಿಣೀತಾ ಸಿನಿಮಾದ ಮೂಲಕ ನಿರ್ದೇಶಕರಾಗಿದ್ದ ಪ್ರದೀಪ್, ಅದಕ್ಕೂ ಮುನ್ನ ಎಡಿಟರ್ ಆಗಿ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಮರ್ದಾನಿ, ಹೆಲಿಕಾಪ್ಟರ್ ಇಲಾ ಸೇರಿದಂತೆ ಹಲವು ಚಿತ್ರಗಳಿಗೆ ಇವರದ್ದೇ ನಿರ್ದೇಶನವಿದೆ. ರಾಣಿ ಮುಖರ್ಜಿ, ಅಭಿಷೇಕ್ ಬಚ್ಚನ್ ಸೇರಿದಂತೆ ಸಾಕಷ್ಟು ಕಲಾವಿದರು ಇವರ ಸಿನಿಮಾಗಳಲ್ಲಿ ನಟಿಸಿದ್ದಾರೆ.