ಬಳ್ಳಾರಿ: ಜಿಲ್ಲೆಯ ಮೋತಿ ಸರ್ಕಲ್ ನಲ್ಲಿ ಭತ್ತದ ಮೂಟೆಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ಮಧ್ಯರಸ್ತೆಯಲ್ಲಿ ಕೆಟ್ಟು ನಿಂತಿದೆ. ಲಾರಿ ಪಲ್ಟಿಯಾಗಿ ಬೀಳುವ ಸ್ಥಿತಿ ತಲುಪಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಇಂದು ಮುಂಜಾನೆ ಜನನಿಬಿಡ ಮೋತಿ ಸರ್ಕಲ್‍ನಲ್ಲಿ ಓವರ್ ಲೋಡ್ ಆಗಿದ್ದ ಲಾರಿಯ ಆಕ್ಸಲ್ ಪ್ಲೇಟ್ ಕಟ್ ಆಗಿ ಕೆಟ್ಟು ನಿಂತಿತ್ತು. ಮೂಟೆಗಳ ಭಾರ ತಡೆಯಲಾಗದೆ ಲಾರಿ ಪಕ್ಕಕ್ಕೆ ವಾಲಿಕೊಂಡು ಬೀಳುವ ಸ್ಥಿತಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಮೋತಿ ಸರ್ಕಲ್ ಮೂಲಕ ಸಂಚಾರ ಮಾಡುವ ವಾಹನ ಸವಾರರು ಭಯ ಪಡುವಂತಾಗಿದೆ. ಲಾರಿ ಬೀಳುವ ಸ್ಥಿತಿ ತಲುಪಿದ ಪರಿಣಾಮ ಟ್ರಾಫಿಕ್ ಪೊಲೀಸರು ವಾಹನಗಳ ಸಂಚಾರ ಮಾರ್ಗವನ್ನು ಬದಲಾಯಿಸಿ ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದಾರೆ.