ಕರಾಚಿ: ಮುಂಬರುವ ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೆ ( Womens T20 World Cup) ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ನಾಯಕಿಯನ್ನಾಗಿ 22 ವರ್ಷದ ಫಾತಿಮಾ ಸನಾ (Fatima Sana) ಅವರನ್ನು ಪಿಸಿಬಿ (PCB) ನೇಮಿಸಿದೆ.
ಅಕ್ಟೋಬರ್ 3 ರಿಂದ 20ರ ವರೆಗೆ ಯುಎಇಯಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಪಾಕ್ ತಂಡವನ್ನು ಫಾತಿಮಾ ಸನಾ ಮುನ್ನಡೆಸಲಿದ್ದಾರೆ ಎಂದು ಪಿಸಿಬಿ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
Advertisement
.@imfatimasana named Pakistan captain for ICC Women’s T20 World Cup 2024 🚨
Our squad for the marquee event 🇵🇰#BackOurGirls pic.twitter.com/NWoF6RmyVH
— Pakistan Cricket (@TheRealPCB) August 25, 2024
Advertisement
ಈ ಹಿಂದೆ ತಂಡದ ನಾಯಕಿಯಾಗಿದ್ದ 37 ವರ್ಷದ ನಿದಾ ದಾರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ. ನಿದಾ ದಾರ್ ನಾಯಕತ್ವದಲ್ಲಿ ಕಳೆದ ತಿಂಗಳು ಮುಕ್ತಾಯಗೊಂಡ ಮಹಿಳೆಯರ ಏಷ್ಯಾ ಕಪ್‍ನಲ್ಲಿ ಪಾಕ್ ತಂಡ ಸೆಮಿಫೈನಲ್‍ನಲ್ಲಿ ಹೊರಬಿದ್ದಿತ್ತು. ಇದಕ್ಕೂ ಮುನ್ನ ಇಂಗ್ಲೆಂಡ್‍ನಲ್ಲಿ ನಡೆದಿದ್ದ ಏಕದಿನ ಮತ್ತು ಟಿ20 ಸರಣಿಯಲ್ಲಿ ಪಾಕ್ ತಂಡ ಸೋಲು ಕಂಡಿತ್ತು. ಹೀಗಾಗಿ ಅವರನ್ನು ತಂಡದ ನಾಯಕತ್ವದಿಂದ ಇಳಿಸಲಾಗಿದೆ. ಆದರೆ ಟಿ20 ವಿಶ್ವಕಪ್ ತಂಡದಲ್ಲಿ ಅವರಿಗೆ ಸ್ಥಾನ ನೀಡಲಾಗಿದೆ.
Advertisement
Advertisement
ಫಾತಿಮಾ ಪಾಕ್ ಪರ ಇದುವರೆಗೆ 41 ಏಕದಿನ ಮತ್ತು 40 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಹಿಂದೆ ಪಾಕಿಸ್ತಾನದ ದೇಶೀಯ ತಂಡಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಕಳೆದ ವರ್ಷ ಕ್ರೈಸ್ಟ್‌ಚರ್ಚ್‌ನಲ್ಲಿ ಕಿವೀಸ್ ವಿರುದ್ಧ ನಡೆದಿದ್ದ ಏಕದಿನ ಪಂದ್ಯದ ನಾಯಕತ್ವ ವಹಿಸಿದ್ದರು, ಆ ಪಂದ್ಯದಲ್ಲಿ ಪಾಕ್ ಗೆಲುವು ಸಾಧಿಸಿತ್ತು.
ಟಿ20 ವಿಶ್ವಕಪ್‍ಗೆ ಪಾಕ್ ಮಹಿಳಾ ತಂಡ:
ಫಾತಿಮಾ ಸನಾ (ನಾಯಕಿ), ಅಲಿಯಾ ರಿಯಾಜ್, ಡಯಾನಾ ಬೇಗ್, ಗುಲ್ ಫಿರೋಜಾ, ಇರಾಮ್ ಜಾವೇದ್, ಮುನೀಬಾ ಅಲಿ (ವಿಕೆಟ್ ಕೀಪರ್), ನಶ್ರಾ ಸುಂಧು, ನಿದಾ ದಾರ್, ಒಮೈಮಾ ಸೊಹೈಲ್, ಸದಾಫ್ ಶಮಾಸ್, ಸಾದಿಯಾ ಇಕ್ಬಾಲ್ (ಫಿಟ್‍ನೆಸ್‍ಗೆ ಒಳಪಟ್ಟಿರುತ್ತದೆ), ಸಿದ್ರಾ ಅಮೀನ್, ಸೈಯದಾ ಅರೂಬ್ ಶಾ, ತಸ್ಮಿಯಾ ರುಬಾಬ್ ಮತ್ತು ತುಬಾ ಹಸನ್. ಟ್ರಾವೆಲಿಂಗ್ ಮೀಸಲು: ನಜಿಹಾ ಅಲ್ವಿ (ವಿಕೆಟ್-ಕೀಪರ್); ಮೀಸಲು ಆಟಗಾರ್ತಿ ರಮೀನ್ ಶಮೀಮ್ ಮತ್ತು ಉಮ್-ಎ-ಹನಿ.