ಮೈಸೂರು: ಗುರುವಾರ ಮಡಿಕೇರಿ ಪ್ರವಾಸ ಕೈಗೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾರಿಗೆ ಹಿಂದೂ ಸಂಘಟನೆಯವರು ಮೊಟ್ಟೆ ಒಡೆದು ಅಗೌರವ ತೋರಿದ್ದರು. ಈ ಘಟನೆಗೆ ಕಾಂಗ್ರೆಸ್ ಮಾತ್ರವಲ್ಲದೇ ಬಿಜೆಪಿ, ಜೆಡಿಎಸ್ ಕೂಡಾ ಅಸಮಾಧಾನ ವ್ಯಕ್ತಪಡಿಸಿತ್ತು. ಇದರ ಹಿನ್ನೆಲೆ ಶುಕ್ರವಾರ ಮಾತನಾಡಿದ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸ್ಫೋಟಕ ಹೇಳಿಯೊಂದನ್ನು ನೀಡಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಯತೀಂದ್ರ, ಸಾವರ್ಕರ್ ಬಗ್ಗೆ ಮಾತನಾಡಿದ್ದಕ್ಕೆ ನಮ್ಮ ತಂದೆ ಸಿದ್ದರಾಮಯ್ಯ ಅವರಿಗೆ ಜೀವಬೆದರಿಕೆಯಿದೆ. ಹಿಂದೂ ಸಂಘಟನೆಗಳಿಂದಲೇ ಬೆದರಿಕೆಗಳು ಬಂದಿವೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.
Advertisement
Advertisement
ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ವಿರೋಧ ಪಕ್ಷದ ನಾಯಕರುಗಳಿಗೆ ಭದ್ರತೆ ಕೊಡಲು ವಿಫಲವಾಗಿದೆ. ಇನ್ನು ಜನರಿಗೆ ಹೇಗೆ ಭದ್ರತೆ ಕೊಡುತ್ತಾರೋ ಗೊತ್ತಿಲ್ಲ. ಜೊತೆಗೆ ಮೊಟ್ಟೆ ಒಡೆಸಿ ಹೇಡಿ ಕೃತ್ಯ ಮಾಡಿದೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಅಂಗಳ ತಲುಪಿದ `ಸಿಎಂ ಬದಲಾವಣೆ’ ವರದಿ
Advertisement
ಬಿಜೆಪಿ ಸರ್ಕಾರ ಮೊದಲು ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆ ಬಗ್ಗೆ ಗಮನ ಹರಿಸಬೇಕು. ಅದು ಬಿಟ್ಟು ವಿರೋಧ ಪಕ್ಷಗಳು ನೀಡುವ ಸಣ್ಣ ಪುಟ್ಟ ಹೇಳಿಕೆಗಳನ್ನು ಹಿಡಿದುಕೊಂಡು, ಅನಗತ್ಯ ಗೊಂದಲ ಸೃಷ್ಟಿಸಿ ಅಪಪ್ರಚಾರ ಮಾಡುತ್ತಿದೆ ಎಂದರು.
Advertisement
ಟೆರರಿಸ್ಟ್‌ಗಳು ಕೂಡಾ ದೇಶ ಪ್ರೇಮಿಗಳೇ ಆಗಿರುತ್ತಾರೆ. ಆದರೆ ಅವರು ಹಿಡಿಯುವ ದಾರಿ ತಪ್ಪಲ್ವಾ? ಅದರಂತೆಯೇ ಸಾವರ್ಕರ್ ಕೂಡಾ ದೇಶ ಪ್ರೇಮಿಯೇ ಆಗಿರಬಹುದು. ಆದರೆ ಆ ದೇಶ ಪ್ರೇಮವನ್ನು ವ್ಯಕ್ತಪಡಿಸುವುದಕ್ಕೋಸ್ಕರ ಹಿಂದೂಯೇತರ ಪ್ರಜೆಗಳನ್ನು ದೇಶದ ಭಾಗವಾಗಿರಬಾರದು, ಅವರು 2ನೇ ದರ್ಜೆಯ ಪ್ರಜೆಗಳಾಗಿರಬೇಕು ಹಾಗೂ ಅವರನ್ನು ದ್ವೇಷಿಸುವುದು ಈ ದೇಶಕ್ಕೆ ಮಾರಕ ಎಂದು ತಿಳಿಸಿದರು. ಇದನ್ನೂ ಓದಿ: ದೆಹಲಿ ಡಿಸಿಎಂ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ – 20 ಕಡೆಗಳಲ್ಲಿ ಶೋಧ