ರಾಯಚೂರು: ಫುಡ್ ಪಾಯಿಸನ್‌ನಿಂದಾಗಿ (Food poisoning) ತಂದೆ, ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ರಾಯಚೂರಿನ (Raichur) ಸಿರವಾರ ತಾಲೂಕಿನ ಕೆ.ತಿಮ್ಮಾಪುರ (K Thimmapura) ಗ್ರಾಮದಲ್ಲಿ ಘಟನೆ ನಡೆದಿದೆ.
ತಂದೆ ರಮೇಶ್(38), ಮಗಳು ನಾಗಮ್ಮ(8), ದೀಪಾ(6) ಮೃತ ದುರ್ವೈವಿಗಳು. ತಾಯಿ ಪದ್ಮಾ, ಮಕ್ಕಳಾದ ಕೃಷ್ಣ, ಚೈತ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಮಾಡಿ ಕಿರುಕುಳ – ಡ್ಯಾಂಗೆ ಹಾರಿ ಯುವತಿ ಆತ್ಮಹತ್ಯೆ
ಬೆಂಗಳೂರಿಗೆ ಗುಳೆ ಹೋಗಿದ್ದ ರಮೇಶ್ ಕುಟುಂಬವು 4 ದಿನಗಳ ಹಿಂದೆ ಗ್ರಾಮಕ್ಕೆ ಬಂದಿದ್ದರು. ಸೋಮವಾರ ಜಮೀನಿನಲ್ಲಿ ಬೆಳೆದಿದ್ದ ತೊಗರಿ ಬೆಳೆಗೆ ರಮೇಶ್ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದರು. ಇದನ್ನೂ ಓದಿ: ಲವ್ವರ್ ಜೊತೆ ಸೇರಿ ಪತಿ ಹತ್ಯೆ – ಟೈಲ್ಸ್‌ನ ಕೆಳಗೆ ಮೃತದೇಹ ಹೂತಿಟ್ಟ ಪತ್ನಿ!
ಬಳಿಕ ರಾತ್ರಿ ರೊಟ್ಟಿ ಚವಳೆಕಾಯಿ ಪಲ್ಯ, ಅನ್ನ, ಸಾಂಬರ್ ಊಟ ಮಾಡಿದ್ದರು. ರಾತ್ರಿ 3 ಗಂಟೆ ಸುಮಾರಿಗೆ ಕುಟುಂಬಸ್ಥರಿಗೆ ಹೊಟ್ಟೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಬಳಿಕ ಅವರನ್ನು ಲಿಂಗಸುಗೂರು ಆಸ್ಪತ್ರೆಗೆ ದಾಖಲಾಗಿತ್ತು.
ಆಸ್ಪತ್ರೆಗೆ ರವಾನಿಸುವ ವೇಳೆ ಮಾರ್ಗ ಮಧ್ಯದಲ್ಲೇ ದೀಪಾ ಕೊನೆಯುಸಿರೆಳೆದಿದ್ದಾಳೆ. ಬಳಿಕ ರಮೇಶ್ ಹಾಗೂ ನಾಗಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇನ್ನುಳಿದ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯು ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.