ಮೈಸೂರು: ರಾತ್ರಿ ಮಲಗಿದ್ದಾಗ ಮಗ ಹಾಸಿಗೆಯಲ್ಲಿಯೇ ಮೂತ್ರ ಮಾಡುತ್ತಾನೆಂದು ಆತನ ಮರ್ಮಾಂಗಕ್ಕೆ ಕ್ರೂರಿ ತಂದೆಯೊಬ್ಬ ರಬ್ಬರ್ ಕಟ್ಟಿದ್ದಾನೆ.
ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ವಾಸವಾಗಿರುವ 50 ವರ್ಷದ ಕೂಲಿ ಕಾರ್ಮಿಕ ವ್ಯಕ್ತಿ ತನ್ನ 5 ವರ್ಷದ ಸ್ವಂತ ಮಗನಿಗೆ ಚಿತ್ರಹಿಂಸೆ ನೀಡಿದ್ದಾನೆ. ಒಂದು ವಾರದ ಹಿಂದೆ ನಡೆದಿರುವ ಪ್ರಕರಣ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಾಲಕ ಅಂಗನವಾಡಿ ಶಾಲೆಗೆ ಬಂದಾಗ ಆತನ ಸ್ಥಿತಿ ನೋಡಿದ ಸಿಬ್ಬಂದಿ ಆತನನ್ನು ವಿಚಾರಿಸಿದ್ದಾರೆ. ಈ ವೇಳೆ ಮಗು ತನ್ನ ತಂದೆಯ ಕ್ರೂರತ್ವವನ್ನು ಬಿಚ್ಚಿಟ್ಟಿದೆ. ಮಹಿಳಾ ಸಾಂತ್ವನ ಸಹಾಯವಾಣಿ ಸಿಬ್ಬಂದಿ ಬಾಲಕನ ನೆರವಿಗೆ ಬಂದಿದ್ದು, ಆತನಿಗೆ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆಯ ಬಳಿಕ ಬಾಲಕನನ್ನು ಬಾಲಮಂದಿರ ಆಶ್ರಯದಲ್ಲಿ ಇರಿಸಲಾಗಿದೆ.
ಬಾಲಕನ ತಂದೆ ವಿರುದ್ಧ ಬಾಲ ನ್ಯಾಯ ಕಾಯ್ದೆ ಅಡಿ ದೂರು ದಾಖಲಿಸಲಾಗಿದೆ.
ಇದನ್ನೂ ಓದಿ:ಗಂಡನ ಮರ್ಮಾಂಗ ಕತ್ತರಿಸಿ ಪರ್ಸಲ್ಲಿ ಹಾಕಿ ತವರು ಮನೆಗೆ ಹೋಗ್ತಿದ್ದ ಪತ್ನಿ!
ಸ್ವಾತಂತ್ರ್ಯ ದಿನಾಚರಣೆ ಮುಗಿಸಿ ಮನೆಗೆ ಹೋಗ್ತಿದ್ದ 12ರ ಬಾಲಕಿ ಮೇಲೆ ರೇಪ್ https://t.co/yRUHIyTK8i #Independenceday #Rape #Girl pic.twitter.com/sIKYM122gj
— PublicTV (@publictvnews) August 16, 2017