ಕಾರವಾರ: ಕುಡಿದ ನಶೆಯಲ್ಲಿ ತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆದಿದ್ದು, ಇದನ್ನ ತಪ್ಪಿಸಲು ಹೋದ ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರೋ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಸರ್ವೋದಯ ನಗರದಲ್ಲಿ ನಡೆದಿದೆ.
ಶೈಲಾ ಅನಿಲ್ ಬಾಣಾವಳಿ(48) ಹಲ್ಲೆಗೊಳಗಾದ ಮಹಿಳೆ. ಇವರಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಓರ್ವ ಪುತ್ರನಿದ್ದಾನೆ. ಮಂಗಳವಾರ ರಾತ್ರಿ ಪತಿ ಅನಿಲ್ ಕಂಠಪೂರ್ತಿ ಕುಡಿದು ಬಂದು ಮಗಳ ಮೇಲೆ ಎರಗಿದ್ದಾನೆ ಹಾಗೂ ಅವಾಚ್ಯ ಶಬ್ಧದಿಂದ ನಿಂದಿಸಿದ್ದಾನೆ. ನಂತರ ಅತ್ಯಾಚಾರಕ್ಕೆ ಪ್ರಯತ್ನಿಸಿದ ವೇಳೆ ಹೆಂಡತಿ ತಡೆದಿದ್ದು, ಈ ವೇಳೆ ಹೆಂಡತಿಯ ಮೇಲೆ ಮರದ ತುಂಡಿನಿಂದ ಹಲ್ಲೆ ನಡೆಸಿದ್ದಾನೆ.
Advertisement
ಶೈಲಾ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿದ ನಂತರ ಪತಿ ಅನಿಲ್ ಮನೆಯಿಂದ ಹೊರನಡೆದಿದ್ದಾನೆ. ಘಟನೆ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.