ನವದೆಹಲಿ: ರಾಷ್ಟ್ರ ರಾಜಧಾನಿಯ ಬೆತುಲ್‍ನ ಮುಲ್ತೈ ಪ್ರದೇಶದಲ್ಲಿ ಚಹಾವೇ ತಂದೆ, ಮಗನ ಜೀವಕ್ಕೆ ಕುತ್ತು ತಂದಿದೆ. ವಿಷಪೂರಿತ ಚಹಾ ಕುಡಿದು ವೃದ್ಧ ರೈತ ಮೃತಪಟ್ಟಿದ್ದು, ಮಗನ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.
ಹಥ್ನಾಪುರದ ನಿವಾಸಿ ನಾತು ಬುವಾಡೆ(80) ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಚಹಾ ತಯಾರಿಸಲು ತನ್ನ ಮಗ ಡೊಮಾಗೆ ಹೇಳಿದ್ದರು. ಆದರೆ ಚಹಾ ತಯಾರಿಸುವಾಗ, ಮಗ ಗೊತ್ತಿಲ್ಲದೆ ಚಹಾ ಎಲೆಗಳ ಬದಲಿದೆ ಅದರಂತೆ ಕಾಣುವ ಬೇರೆಯ ಎಲೆಯನ್ನು ಹಾಕಿದ್ದಾನೆ. ಅಷ್ಟೇ ಅಲ್ಲದೆ ಅದೇ ಚಹಾವನ್ನು ತಂದೆ ಮತ್ತು ಮಗ ಇಬ್ಬರೂ ಕುಡಿದಿದ್ದಾರೆ. ಸ್ವಲ್ಪ ಸಮಯದ ನಂತರ ಇಬ್ಬರೂ ವಾಂತಿ ಮಾಡಲು ಶುರುಮಾಡಿದ್ದಾರೆ.
Advertisement
Advertisement
ತಡರಾತ್ರಿ ಇಬ್ಬರ ಆರೋಗ್ಯ ಸ್ಥಿತಿ ಗಂಭಿರವಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ತಂದೆ ದಾರಿಮಧ್ಯೆಯೇ ಕೊನೆಯುಸಿರು ಎಳೆದಿದ್ದಾರೆ. ಮಗನನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಸದ್ಯ ಮಗನ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದಿದ್ದಾರೆ.
Advertisement
ಈ ಬಗ್ಗೆ ವೈದ್ಯರು ಪ್ರತಿಕ್ರಿಯಿಸಿ, ಚಹಾದಲ್ಲಿ ವಿಷಕಾರಿ ಅಂಶ ಬೆರೆತಿದೆ. ಎಲೆಗಳಂತಹ ವಿಷಕಾರಿ ವಸ್ತುಗಳನ್ನು ಚಹಾದಲ್ಲಿ ಹಾಕಿ ತಂದೆ ಮಗ ಕುಡಿದಿದ್ದಾರೆ. ಇದು ಕಾರ್ಕೊಟಕ ವಿಷವಾಗಿರುವುದರಿಂದ ಮನುಷ್ಯನ ದೇಹಕ್ಕೆ ಸೇರಿದರೆ ತುಂಬ ಅಪಾಯಕಾರಿ.
Advertisement
ತಂದೆ, ಮಗ ಇಬ್ಬರೂ ಅವರ ಚಿಕ್ಕಪ್ಪನ ಮನೆಯಲ್ಲಿದ್ದರು ಎಂದು ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.