ದಾವಣಗೆರೆ: ಹರಿಹರ (Harihara) ತಾಲೂಕಿನ ದೊಗ್ಗಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದ ಬೀಗ ಒಡೆದು ಚಿನ್ನ (Gold), ಬೆಳ್ಳಿ ಆಭರಣ ದೋಚಿದ್ದ ಅಪ್ಪ, ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಯರಗುಂಟೆ ಗ್ರಾಮದ ವೀರೇಶ್ (68), ಪುತ್ರ ಶಿವಕುಮಾರ್ (26) ಎಂದು ಗುರುತಿಸಲಾಗಿದೆ. ಇಬ್ಬರು ಹರಿಹರದ ಶಂಷಿಪುರದಲ್ಲಿ ವಾಸವಾಗಿದ್ದರು. ಜ.2 ರಂದು ಆರೋಪಿಗಳು ದೇವಾಲಯದ ಬೀಗ ಒಡೆದು, ಆಂಜನೇಯ ಸ್ವಾಮಿಯ ಬೆಳ್ಳಿಯ ಮುಖ, ಕಾಶಿ, ಕಿರೀಟ, ಹಸ್ತ, ಸಿಂಹದ ಮುಖ, ಛತ್ರಿಯಯನ್ನು ಕಳ್ಳತನ ಮಾಡಿದ್ದರು. ಇದನ್ನೂ ಓದಿ: ಮೋಸ ಮಾಡಿದವ್ರು ಉದ್ಧಾರ ಆಗಲ್ಲ – ಸಮೃದ್ಧಿ ರಾಮ್ ವಿರುದ್ಧ ಪ್ರತಿಭಾ ಶೆಟ್ಟಿ ಗರಂ
ಆರೋಪಿಗಳು ಜಿಲ್ಲೆಯ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಕಳ್ಳತನಕ್ಕೆ ಸಂಬಂಧಿಸಿದಂತೆ ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಕೋಲಾರ | ರಾಸಾಯನಿಕ ಬಳಸಿ ನಕಲಿ ಹಾಲು ತಯಾರಿಕೆ – ಐವರು ಅರೆಸ್ಟ್

