ನವದೆಹಲಿ: ಬಹಳಷ್ಟು ಪೋಷಕರು ತಮ್ಮ ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡಬೇಕು, ರ‍್ಯಾಂಕ್ ಪಡೆದುಕೊಳ್ಳಬೇಕು ಎಂದು ಅನೇಕ ಶಿಸ್ತುಬದ್ಧ ನಿಯಮಗಳನ್ನು ವಿಧಿಸುತ್ತಾರೆ. ಆದರೆ, ಇಲ್ಲೊಬ್ಬರು ತನ್ನ 6 ವರ್ಷದ ಮಗುವಿನೊಂದಿಗೆ ವೇಳಾಪಟ್ಟಿ ಒಪ್ಪಂದ ಮಾಡಿಕೊಳ್ಳುವ ಮೂಲಕ ತಮ್ಮ ಮಗನಿಗೆ ಶಿಸ್ತು ರೂಢಿಸಲು ಮುಂದಾಗಿದ್ದಾರೆ.
ಭಾರತೀಯ ಮೂಲದ ವ್ಯಕ್ತಿಯೊಬ್ಬರು ತಮ್ಮ 6 ವರ್ಷದ ಮಗನಿಗೆ ವೇಳಾಪಟ್ಟಿ ರಚಿಸಿಕೊಟ್ಟಿದ್ದು, ಇದನ್ನು ಟ್ವೀಟ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಳಕೆದಾರರು ಅವರು ತಮ್ಮ ಮಗ ಅಬೀರ್ ಅವರೊಂದಿಗೆ ಸಹಿ ಮಾಡಿದ ಕೈಬರಹದ ವೇಳಾಪಟ್ಟಿ ಒಪ್ಪಂದದ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.
Advertisement
Me and my 6 year old signed and agreement today for his daily schedule and performance linked bonus ???? pic.twitter.com/b4VBKTl8gh
— Batla_G (@Batla_G) February 1, 2022
Advertisement
ಏನಿದು ವೇಳಾಪಟ್ಟಿ ಒಪ್ಪಂದ?- ಈ ಒಪ್ಪಂದವು ಮಗು ದಿನನಿತ್ಯದ ಚಟುವಟಿಕೆಗಳನ್ನು ಒಳಗೊಂಡಿದೆ. ಬೆಳಿಗ್ಗೆ ಎದ್ದು ಶುಚಿಯಾಗುವುದು, ಹಾಲು ಕುಡಿಯುವುದು ಮತ್ತು ಹೋಂ ವರ್ಕ್ ಮಾಡುವುದು, ಅಳದೇ, ಕೂಗಾಡದೇ, ಗೊಣಗದೇ ಅಥವಾ ಜಗಳವಾಡದೆ ತನ್ನ ಕೆಲಸಗಳನ್ನು ಪೂರ್ಣಗೊಳಿಸಬೇಕು. ಹೀಗೆ ಮಾಡಿದರೆ, ತಂದೆ ಮಗನಿಗೆ ಪ್ರತಿದಿನ 10 ರೂ. ನೀಡುವುದಾಗಿ ಪಟ್ಟಿಯಲ್ಲಿ ಬರೆದಿದ್ದಾರೆ. ಅಲ್ಲದೆ, ಮಗು ಒಂದು ವಾರ ಪೂರ್ತಿ ಒಳ್ಳೆಯ ನಡತೆಯೊಂದಿಗೆ ಮುಂದುವರಿದರೆ, ಅವನಿಗೆ ಬೋನಸ್ ಆಗಿ 100 ರೂ. ಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ.
Advertisement
I think about 2000 Rs
Then schools started and time table had to be changed
Problem was "Chhutta" and i ran out of Rs 10 notes ???????? and we started star chart but usme paise wala feel nahi aaya
Abhi restart karenge with a new time table now
— Batla_G (@Batla_G) April 29, 2022
Advertisement
ಇದೀಗ ಜಾಲತಾಣದಲ್ಲಿ ಈ ಒಪ್ಪಂದಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ. 32 ಸಾವಿರಕ್ಕೂ ಹೆಚ್ಚು ಮಂದಿ ಇದಕ್ಕೆ ಸ್ಪಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಗುವಿನ ತಂದೆ ನನ್ನ ಮಗು ಸುಮಾರು 2 ಸಾವಿರ ರೂ. ಸಂಪಾದಿಸಿದ್ದಾನೆ. ಶಾಲೆಗಳು ಪ್ರಾರಂಭವಾದ ಬಳಿಕ ವೇಳಾಪಟ್ಟಿ ಬದಲಾಯಿಸಲಾಯಿತು ಎಂದು ಹೇಳಿದ್ದಾರೆ.