ಲಕ್ನೋ: ಮಗಳನ್ನು ಕೊಲ್ಲಲು ತಂದೆಯೇ 1 ಲಕ್ಷ ರೂ. ಸುಪಾರಿ ಕೊಟ್ಟ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ.
ನವೀನ್ ಕುಮಾರ್ ಯುವತಿಯ ತಂದೆ. ಈತನ ಮಗಳು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಳು. ಆದರೆ ನವೀನ್ ಕುಮಾರ್‌ಗೆ ಇಷ್ಟವಿರಲಿಲ್ಲ. ನವೀನ್‍ಕುಮಾರ್ ಮಗಳಿಗೆ ಸಾಕಷ್ಟು ಬಾರಿ ಪ್ರಿಯಕರನೊಂದಿಗೆ ಇದ್ದ ಸಂಬಂಧವನ್ನು ಕಡಿತಗೊಳಿಸುವಂತೆ ಹೇಳಿದ್ದ. ಆದರೂ ಆಕೆ ಕೇಳಿರಲಿಲ್ಲ. ಅದೇ ಸಮಯದಲ್ಲಿ ಆಕೆ ಮಹಡಿಯಿಂದ ಜಿಗಿದಿದ್ದಳು. ಇದನ್ನೇ ದಾಳವಾಗಿಸಿಕೊಂಡ ತಂದೆ ನವೀನ್ ಕುಮಾರ್ ಆಕೆ ಕೋತಿಯನ್ನು ನೋಡಿ ಹೆದರಿ ಮಹಡಿಯಿಂದ ಸುಳ್ಳು ಕಥೆ ಕಟ್ಟಿದ್ದಾನೆ.
Advertisement
Advertisement
ನಂತರ ಆಸ್ಪತ್ರೆಗೆ ದಾಖಲಿಸಿ, ಅಲ್ಲೇ ಇದ್ದ ವಾರ್ಡ್ ಬಾಯ್ ನರೇಶ್‍ಗೆ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಕ್ಲೋರೈಡ್ ಅನ್ನು ಚುಚ್ಚುಮದ್ದು ನೀಡಲು 1 ಲಕ್ಷ ರೂ.ಅನ್ನು ನೀಡಿದ್ದಾನೆ. ಅದರಂತೆ ನರೇಶ್ ಡಾಕ್ಟರ್ ವೇಷವನ್ನು ಹಾಕಿಕೊಂಡು ಆಕೆಗೆ ಚುಚ್ಚು ಮದ್ದನ್ನು ನೀಡಿದ್ದಾನೆ. ಇದರಿಂದಾಗಿ ಆಕೆಯ ಆರೋಗ್ಯ ಇನ್ನೂ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಮತ್ತೊಂದು ಆಸ್ಪತ್ರೆಗೆ ದಾಖಲಿಸಿದಾಗ ಅಲ್ಲಿ ಆಕೆಗೆ ಪೊಟ್ಯಾಸಿಯಮ್ ಕ್ಲೋರೈಡ್ ಅನ್ನು ನೀಡಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಮೂಢನಂಬಿಕೆಯಿಂದ ಅಪ್ರಾಪ್ತ ಮಗಳನ್ನು ಹೊಡೆದು ಸಾಯಿಸಿದ ಪೋಷಕರು
Advertisement
Advertisement
ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಅಧಿಕಾರಿಗಳು ಪೊಲೀಸರಿಗೆ ವಿಷಯವನ್ನು ತಿಳಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದಾಗ ಸಿಸಿ ಟಿವಿ ದೃಶ್ಯಾವಳಿಯನ್ನು ವೀಕ್ಷಿಸಿದಾಗ ವಾರ್ಡ್‍ಬಾಯ್ ನರೇಶ್ ಪೊಟ್ಯಾಸಿಯಂ ಕ್ಲೋರೈಡ್‍ನ್ನು ನೀಡಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಾರ್ಡ್ ಬಾಯ್ ನರೇಶ್‍ನನ್ನು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸಿದಾಗ ಈ ಕೆಲಸ ಮಾಡಲು ಯುವತಿಯ ತಂದೆಯೇ 1 ಲಕ್ಷ ನೀಡಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧಿಸಿ ನವೀನ್ ಕುಮಾರ್ ಹಾಗೂ ನರೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಒಟ್ಟಿಗೆ ಓದಿದ್ರೂ ಅತ್ಯಾಚಾರ ಮಾಡಲು ಸಹಾಯ- ಕೃತ್ಯದ ವೀಡಿಯೋ ಅತ್ತೆಗೆ ಕಳಿಸಿದ ಕಿರಾತಕರು