ತಿರುವನಂತಪುರಂ: ಕೇರಳದ ಅಲಪ್ಪುಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಸಂಘಟನೆ ಆಯೋಜಿಸಿದ್ದ ಮೆರವಣಿಗೆಯಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ಬಾಲಕ ಹಾಗೂ ಆತನ ತಂದೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
ಕೆಲ ದಿನಗಳ ಹಿಂದೆ `ಗಣರಾಜ್ಯವನ್ನು ರಕ್ಷಿಸಿ’ ಎಂಬ ಘೋಷ ವಾಕ್ಯದಡಿ ನಡೆದ ಪಿಎಫ್‍ಐ ರ‍್ಯಾಲಿಯಲ್ಲಿ ಬಾಲಕನೊಬ್ಬ ಹಿಂದೂ ಹಾಗೂ ಕ್ರಿಶ್ಚಿಯನ್ನರ ವಿರುದ್ಧ ಘೋಷಣೆ ಕೂಗಿರುವ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬರ ಹೆಗಲ ಮೇಲೆ ಕುಳಿತಿರುವ ಬಾಲಕ, ಹಿಂದೂಗಳು ಅಂತ್ಯಕ್ರಿಯೆ ವೇಳೆ ಅಕ್ಕಿ ಇಡಬೇಕು ಮತ್ತು ಕ್ರಿಶ್ಚಿಯನ್ನರು ಅವರ ಅಂತ್ಯಕ್ರಿಯೆ ವೇಳೆ ಧೂಪ ಹಾಕಬೇಕು. ನೀವು ಮಾರ್ಯದೆಯಿಂದ ಬದುಕುವುದಾದರೆ, ನಮ್ಮ ನೆಲದಲ್ಲಿ ಬದುಕಬಹುದು. ನೀವು ಯೋಗ್ಯವಾಗಿ ಬದುಕದಿದ್ದರೆ, ನಮಗೂ ಆಜಾದಿ (ಸ್ವಾತಂತ್ರ್ಯ) ತಿಳಿದಿದೆ. ಯಮ ನಿಮ್ಮ ಮನೆಗೆ ಬರ್ತಾನೆ, ನೀವು ಗೌರವಯುತವಾಗಿ ಬದುಕಿದರೆ ನಮ್ಮ ಜಾಗದಲ್ಲಿ ಬದುಕಬಹುದು. ಇಲ್ಲದಿದ್ದರೆ ಏನಾಗುತ್ತದೆ ಎನ್ನುವುದು ನಮಗೆ ಗೊತ್ತಿಲ್ಲ ಎಂದೂ ಘೋಷಣೆ ಕೂಗಿದ್ದ. ಇದನ್ನೂ ಓದಿ: PFI ರ್‍ಯಾಲಿಯಲ್ಲಿ ಪ್ರಚೋದನಕಾರಿ ಘೋಷಣೆ – 18 ಮಂದಿ ಅರೆಸ್ಟ್
Advertisement
Advertisement
ಈ ಸಂಬಂಧ ಮೆರವಣಿಗೆ ವೇಳೆ ವ್ಯಕ್ತಿಯ ಹೆಗಲ ಮೇಲೆ ಕುಳಿತ ಬಾಲಕ ಮತ್ತು ಆತನ ಪೋಷಕರ ವಿವರಗಳನ್ನು ಸಂಗ್ರಹಿಸಲು ಕೊಚ್ಚಿಯಲ್ಲಿ ಆಲಪ್ಪುಳದ ಪೊಲೀಸ್ ತಂಡವು ಬೀಡುಬಿಟ್ಟಿತ್ತು. ಆ ಬಳಿಕ ಇಂದು ಬಾಲಕ ಮತ್ತು ಆತನ ತಂದೆಯನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಸಂಜೆ 7 ರಿಂದ ಬೆಳಗ್ಗೆ 6 ರವರೆಗೆ ಮಹಿಳೆ ಉದ್ಯೋಗಿಗಳನ್ನು ದುಡಿಸುವಂತಿಲ್ಲ: ಯೋಗಿ ಆದೇಶ
Advertisement
ಪೊಲೀಸರು ಬಾಲಕನ ಕುಟುಂಬವನ್ನು ಪಲ್ಲೂರುತಿಯಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದು ಬಳಿಕ ಬಾಲಕನನ್ನು ಕೌನ್ಸೆಲಿಂಗ್‍ಗೆ ಕರೆದೊಯ್ದಿದೆ. ಬಾಲಕನ ತಂದೆಯನ್ನು ವಶಕ್ಕೆ ಪಡೆಯುವುದನ್ನು ವಿರೋಧಿಸಿ ಪಿಎಫ್‍ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ ಬಾಲಕನ ಮನೆ ಮುಂಭಾಗದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ವರದಿಯಾಗಿದೆ.