ಬೆಳಗಾವಿ: ಇಡೀ ಮಾನವ ಕುಲವೇ ತಲೆ ತಗ್ಗಿಸುವ ಪೈಶಾಚಿಕ ಕೃತ್ಯಕ್ಕೆ ಬೆಳಗಾವಿ (Belagavi) ಜಿಲ್ಲೆ ಸಾಕ್ಷಿಯಾಗಿದೆ. ಎರಡು ಮಕ್ಕಳಿರುವ ತಂದೆಯಿಂದಲೇ ಅಪ್ರಾಪ್ತೆ ಗರ್ಭಿಣಿಯಾದ ಘಟನೆ ಬೆಳಗಾವಿಯ ಕುಲಗೋಡ (Kulagod) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಸಪ್ಪ ಅಡಿವೆಪ್ಪ ಹಳ್ಳೂರ ಎಂಬಾತನನ್ನು ಬಾಲಕಿಯ ಪೋಷಕರು ನೀಡಿದ ದೂರಿನ ಅಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಪುಸಲಾಯಿಸಿ ಆಕೆಯೊಂದಿಗೆ ನಿಂತರ ದೈಹಿಕ ಸಂಪರ್ಕವನ್ನು ಬಸಪ್ಪ ಬೆಳೆಸಿದ್ದ ಎನ್ನಲಾಗಿದೆ. ನಿರಂತರ ದೈಹಿಕ ಸಂಪರ್ಕದ ಹಿನ್ನೆಲೆ ಬಾಲಕಿ 8 ತಿಂಗಳ ಗರ್ಭಿಣಿಯಾಗಿದ್ದಾಳೆ. ಇದನ್ನೂ ಓದಿ: ಡಿಜಿಪಿ ಅಪ್ಪನಿಗೆ ಮಗಳು ತಂದ ಸಂಕಷ್ಟ – ಸರ್ಕಾರದಿಂದ ಎರಡೆರಡು ತನಿಖೆಗೆ ಆದೇಶ
ವೈದ್ಯರ ಬಳಿ ಬಾಲಕಿಯನ್ನು ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ತನಿಖೆ ಮುಂದುವರೆದಿದೆ. ಇದನ್ನೂ ಓದಿ: ಹೈದರಾಬಾದ್‌ನಲ್ಲಿ ದಂಪತಿ ಆತ್ಮಹತ್ಯೆ – ಇಬ್ಬರು ಮಕ್ಕಳು ಶವವಾಗಿ ಪತ್ತೆ