ಚಿಕನ್ ಸಾರು ಖಾಲಿಯಾಗಿದ್ದಕ್ಕೆ ಜಗಳ- ಮಗನನ್ನೇ ಕೊಂದ ಅಪ್ಪ!

Public TV
1 Min Read
MANGALURU MURDER

ಮಂಗಳೂರು: ಚಿಕನ್ ಸಾರು ವಿಚಾರವಾಗಿ ಅಪ್ಪ-ಮಗನ ನಡುವೆ ನಡೆದ ಜಗಳ ಮಗಳ ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಬ್ರಹ್ಮಣ್ಯದ ಗುತ್ತಿಗಾರು (Guttigaru) ಎಂಬಲ್ಲಿ ನಡೆದಿದೆ.

Chicken Sambar

ಮೊಗ್ರ ಏರಣಗುಡ್ಡೆಯ ಮಾತೃ ಮಜಲು ನಿವಾಸಿ ಶೀನ ಹಾಗೂ ಮಗ ಶಿವರಾಮ ನಡುವೆ ಕಲಹ ನಡೆದಿದೆ. ಕೋಳಿ ಪದಾರ್ಥದ ವಿಚಾರವಾಗಿ ತಂದೆ ಹಾಗೂ ಮಗನ ನಡುವೆ ಜಗಳ ನಡೆದಿದೆ. ಮಗ ಶಿವರಾಮ ಮನೆಗೆ ಬರುವಾಗ ಕೋಳಿ ಪದಾರ್ಥ (Chicken Curry) ಖಾಲಿಯಾಗಿತ್ತು. ಈ ವಿಚಾರವಾಗಿ ಅಪ್ಪ-ಮಗನ ನಡುವೆ ಜಗಳ ಪ್ರಾರಂಭವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಕೋಪಗೊಂಡ ತಂದೆ, ಮಗನ ತಲೆಗೆ ಬಡಿಗೆಯಿಂದ ಹೊಡೆದಿದ್ದಾರೆ.

police jeep 1

ತಂದೆ ಕೊಟ್ಟ ಬಲವಾದ ಏಟಿನಿಂದ ತಲೆ ಒಡೆದು ಪುತ್ರ ಶಿವರಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಬಳಿಕ ಕೊಲೆ ಆರೋಪಿ ಶೀನನನ್ನ ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ಶಿವರಾಮ ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನ ಅಗಲಿದ್ದಾರೆ. ಇದನ್ನೂ ಓದಿ: Delhi Metro Girl: ನಾನೂ ಸಂಪ್ರದಾಯಸ್ಥ ಹುಡ್ಗಿ, ಏನ್ ಬೇಕಾದ್ರೂ ಧರಿಸ್ತೀನಿ ಎಂದ ಬಿಕಿನಿ ಗರ್ಲ್

Share This Article