ತಿರುವನಂತಪುರಂ: ವೃದ್ಧನೊಬ್ಬ ತನ್ನ ಮಗ, ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳ ಸಾವಿಗೆ ಕಾರಣವಾದ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ.
ಮೃತ ದುರ್ದೈವಿಗಳನ್ನು ಫೈಸಲ್, ಪತ್ನಿ ಶೀಬಾ, ಮಕ್ಕಳನ್ನು ಮೆಹ್ರಾ (16) ಹಾಗೂ ಅಸ್ನಾ (13) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಹಮೀದ್ (79) ಎಂದು ಗುರುತಿಸಲಾಗಿದ್ದು, ಈತ ಫೈಸಲ್ ತಂದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Advertisement
Advertisement
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಮೃತ ಫೈಸಲ್ ಜೀವನ ನಿರ್ವಹಣೆಗಾಗಿ ದಿನಸಿ ಅಂಗಡಿ ಇಟ್ಟುಕೊಂಡಿದ್ದನು. ಫೈಸಲ್ ಮತ್ತು ಆತನ ತಂದೆ ಹಮೀದ್ ಹಲವು ವರ್ಷಗಳಿಂದ ಬೇರೆ ಬೇರೆಯಾಗಿ ವಾಸವಾಗಿದ್ದರು. ಇದನ್ನೂ ಓದಿ: ಚುನಾವಣೆಗೆ ಮಾಡಿದ್ದ ಸಾಲ ತೀರಿಸಲು ಪತ್ನಿಯನ್ನು ಮಾರಿದ ಪತಿ
Advertisement
ಜಮೀನು ನೀಡದ ಕಾರಣ ತನ್ನ ಮಗನ ಹತ್ಯೆಗೆ ಹಮೀದ್ ಪ್ಲ್ಯಾನ್ ಮಾಡಿದ್ದು, ಮನೆಯಲ್ಲಿ ಪೆಟ್ರೋಲ್ ಶೇಖರಿಸಿಕೊಂಡಿದ್ದ. ಅಲ್ಲದೆ ಬೆಂಕಿ ನಂದಿಸದಂತೆ ಮನೆಯ ಟ್ಯಾಂಕ್‍ನಲ್ಲಿದ್ದ ನೀರನ್ನು ಪೂರ್ತಿ ಖಾಲಿ ಮಾಡಿದ್ದನು. ಇತ್ತ ಫೈಸಲ್ ಮತ್ತು ಆತನ ಕುಟುಂಬ ಮಲಗಿದ್ದ ವೇಳೆ ಹಮೀದ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಎಸ್ಕೇಪ್ ಆಗಿದ್ದನು.
Advertisement
ಬೆಂಕಿ ಮನೆ ಪೂರ್ತಿ ಹೊತ್ತಿಕೊಂಡಿದ್ದು, ಪರಿಣಾಮ ಫೈಸಲ್ ಮತ್ತು ಆತನ ಕುಟುಂಬ ಸುಟ್ಟು ಭಸ್ಮವಾಗಿದೆ. ಕೊಲೆಯ ನಂತರ ಆರೋಪಿ ಸಮೀಪದ ತನ್ನ ಸಂಬಂಧಿಕರ ಮನೆಗೆ ಹೋಗಿದ್ದನು. ಅಲ್ಲಿಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ಘಟನೆ ಕುರಿತಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಕೇರಳದ ಮಹಿಳಾ ಉದ್ಯಮಿ ಹತ್ಯೆ – ತಲೆಮರೆಸಿಕೊಂಡ ಆರೋಪಿ