ವಿಜಯಪುರ: ಮನೆಯ ವಸ್ತುಗಳನ್ನು ಮಾರಾಟ ಮಾಡಿ ಕಡಿದು ಮಜಾ ಮಾಡುತ್ತಿದ್ದ ಮಗನನ್ನು ತಂದೆಯೇ ಹತ್ಯೆ ಮಾಡಿದ ಘಟನೆ ನಾಗಠಾಣದಲ್ಲಿ (Nagathan) ನಡೆದಿದೆ.
ಮುತ್ತಪ್ಪ ಮಸಳಿ (38) ಹತ್ಯೆಯಾದ ದುರ್ದೈವಿಯಾಗಿದ್ದಾನೆ. ತಂದೆ ಬಸಪ್ಪ ಮಸಳಿ ಮಗನನ್ನೇ ಹತ್ಯೆಗೈದಿರುವ ಆರೋಪಿಯಾಗಿದ್ದಾನೆ. ಮೃತ ಯುವಕ ತೀವ್ರ ಮದ್ಯ ವ್ಯಸನಿಯಾಗಿದ್ದ. ಆತನಿಗೆ ಹಲವು ಬಾರಿ ತಂದೆ ಬಸಪ್ಪ ಕುಡಿಯುವುದನ್ನು ಬಿಡುವಂತೆ ಬುದ್ಧಿವಾದ ಹೇಳಿದ್ದ. ಆದರೆ ಆತ ಕುಡಿಯುವುದನ್ನು ಬಿಟ್ಟಿರಲಿಲ್ಲ. ಇದನ್ನೂ ಓದಿ: ಇಸ್ರೋ ಮಾಜಿ ಅಧ್ಯಕ್ಷ, ಖ್ಯಾತ ವಿಜ್ಞಾನಿ ಕಸ್ತೂರಿ ರಂಗನ್‍ಗೆ ಹೃದಯಾಘಾತ
ಕುಡಿಯಲು ಹಣ ಸಿಗದಿದ್ದಾಗ ಮನೆಯಲ್ಲಿದ್ದ ವಸ್ತುಗಳನ್ನು ಮಾರಾಟ ಮಾಡಿ ಕುಡಿಯುತ್ತಿದ್ದ. ಅಲ್ಲದೇ ಹೊಲದಲ್ಲಿದ್ದ ವಸ್ತುಗಳನ್ನು ಮಾರಾಟ ಮಾಡಿ ಕುಡಿಯುತ್ತಿದ್ದ ಎಂದು ತಿಳಿದು ಬಂದಿದೆ. ಈ ಸಲುವಾಗಿ ಹಲವು ಬಾರಿ ಮುತ್ತಪ್ಪನಿಗೆ ತಿಳುವಳಿಕೆ ಹೇಳಲಾಗಿತ್ತು. ಆದರೆ ಆತ ಹಳೆಯ ಚಾಳಿಯನ್ನು ಬಿಟ್ಟಿರಲಿಲ್ಲ. ಇದರಿಂದ ರೋಸಿ ಹೋಗಿದ್ದ ಆತನ ತಂದೆ ತಲೆಗೆ ಸಲಾಕೆಯಿಂದ ಹೊಡೆದಿದ್ದು, ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈ ಸಂಬಂಧ ವಿಜಯಪುರ (Vijayapura) ಗ್ರಾಮೀಣ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಸಲಿ ಚಿನ್ನ ಕದ್ದು, ನಕಲಿ ಚಿನ್ನ ಇಟ್ಟು ವಂಚನೆ ಮಾಡ್ತಿದ್ದ ಚಾಲಾಕಿ ಕಳ್ಳಿಯರು ಅರೆಸ್ಟ್
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]