ಹಸೆಮಣೆ ಏರಬೇಕಿದ್ದ ಮಗಳನ್ನ ಅಪಹರಿಸಿದ ತಂದೆ

Public TV
2 Min Read
bride

-ಮದ್ವೆ ನಿಶ್ಚಯಿಸಿ, ಕೊನೆಗೆ ನೋ..ನೋ… ಅಂದ ಅಪ್ಪ

ಚೆನ್ನೈ: ವ್ಯಕ್ತಿಯೊಬ್ಬ ಮಗಳ ಪ್ರೇಮ ವಿವಾಹಕ್ಕೆ ಮೊದಲು ಒಪ್ಪಿ, ಬಳಿಕ ಮನಸ್ಸು ಬದಲಾವಣೆ ಮಾಡಿಕೊಂಡು ಮದುವೆಯ ಹಿಂದಿನ ದಿನ ಮಗಳನ್ನೇ ಕಿಡ್ನ್ಯಾಪ್ ಮಾಡಿರುವ ಘಟನ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.

ವರ ಸತೀಶ್ ಸಿಂಗಪುರದಲ್ಲಿ ಕೆಲಸ ಮಾಡುತ್ತಿದ್ದು, ಕುಂಬಕೋಣಂನ ಕೊರನಾಟ್ಟು ಕರುಪುರದ ಕಾಮರಾಜನ್ ಎಂಬವರ ಪುತ್ರನಾಗಿದ್ದನು. ವಧು ಸುಭಾಶಕ್ತಿ ಅದೇ ಪ್ರದೇಶದ ರವಿ ಅವರ ಪುತ್ರಿಯಾಗಿದ್ದಳು. ಇವರಿಬ್ಬರಿಗೂ ಗುರುವಾರ ಮದುವೆ ನಿಶ್ಚಯವಾಗಿತ್ತು. ಆದರೆ ಮದುವೆಯ ಹಿಂದಿನ ದಿನ ತಂದೆಯೇ ಮಗಳನ್ನು ಅಪಹರಿಸಿ ಕೂಡಿ ಹಾಕಿದ್ದಾರೆ.

MARRIAGE

ಏನಿದು ಪ್ರಕರಣ?
ಸತೀಶ್ ಮತ್ತು ಸುಭಾಶಕ್ತಿ ಕಳೆದ ಎಂಟು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ ಇವರ ಪ್ರೀತಿಗೆ ಎರಡು ಕುಟುಂಬದವರು ಜಾತಿ ಕಾರಣದಿಂದ ವಿರೋಧ ವ್ಯಕ್ತಪಡಿಸಿದ್ದರು. ಪ್ರೇಯಸಿಯ ಪೋಷಕರನ್ನು ಹೇಗಾದರೂ ಒಪ್ಪಿಸಿ ಮದುವೆಯಾಗಬೇಕೆಂಬ ಉದ್ದೇಶದಿಂದ ಸತೀಶ್ ಇತ್ತೀಚೆಗೆ ಸಿಂಗಪೂರ್ ನಿಂದ ಬಂದಿದ್ದನು. ಬಳಿಕ ಸುಭಾಶಕ್ತಿ ಮನೆಗೆ ಹೋಗಿ ಅವರ ತಾಯಿ ಮಾಧವಿ ಜೊತೆ ಮಾತನಾಡಿ ಅವರ ಮನವೊಲಿಸಿ ಮದುವೆಗೆ ಒಪ್ಪಿಸಿದ್ದನು.

ಮೊದಲಿಗೆ ಇಬ್ಬರ ಮದುವೆಯನ್ನು ರಿಜಿಸ್ಟ್ರಾರ್ ಕಚೇರಿಯಲ್ಲಿ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ನಂತರ ಎರಡೂ ಕುಟುಂಬದವರು ತಮ್ಮ ಮನಸ್ಸು ಬದಲಾವಣೆ ಮಾಡಿಕೊಂಡು ಗುರುವಾರ ತಿರುನಾಗೇಶ್ವರಂನಲ್ಲಿ ಇಬ್ಬರಿಗೂ ಮದುವೆ ಮಾಡಲು ನಿಶ್ಚಯ ಮಾಡಿದ್ದರು.

marriage 1

ಬುಧವಾರ ರಾತ್ರಿ ವರನ ಕಡೆಯವರು ಮದುವೆ ಮಂಟಪಕ್ಕೆ ಬಂದಿದ್ದಾರೆ. ಆದರೆ ವಧು ಕುಟುಂಬಸ್ಥರು ಬಂದಿರಲಿಲ್ಲ. ಬಳಿಕ ವಧು ಸುಭಾಶಕ್ತಿ ಸತೀಶ್‍ಗೆ ಫೋನ್ ಮಾಡಿ ತನ್ನ ತಂದೆ ನನ್ನನ್ನು ಕಿಡ್ನ್ಯಾಪ್ ಮಾಡಿ ರೂಮಿನಲ್ಲಿ ಕೂಡಿ ಹಾಕಿ ಲಾಕ್ ಮಾಡಿಕೊಂಡಿದ್ದಾರೆ. ಒಂದು ವೇಳೆ ಈ ಮದುವೆ ನಿಂತುಹೋದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಧು ಕಣ್ಣೀರಿಟ್ಟಿದ್ದಾಳೆ.

ತಕ್ಷಣ ವಧು ಸತೀಶ್ ಕುಂಬಕೋಣಂನಲ್ಲಿನ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾನೆ. ಹುಡುಗಿಯ ಪೋಷಕರು ಮದುವೆಗ ಒಪ್ಪಿ ನಿಶ್ಚಯ ಮಾಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಆಕೆಯನ್ನು ಅಪಹರಿಸಿ, ಅಪರಿಚಿತ ಸ್ಥಳದಲ್ಲಿ ಲಾಕ್ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾನೆ.

ಅಷ್ಟೇ ಅಲ್ಲದೇ ವಧುವನ್ನು ಹುಡುಕಿ ನಮ್ಮ ಮದುವೆ ನಡೆಸುವಂತೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾನೆ. ಸದ್ಯಕ್ಕೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ವಧು ಸುಭಾಶಕ್ತಿ ಪೋಷಕರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *