ಲಕ್ನೋ: ಮೊದಲ ಪತಿ ತೀರಿಕೊಂಡ ನಂತರ 2ನೇ ಮದುವೆಯಾಗಿದ್ದ 28 ವರ್ಷದ ಸೊಸೆಯನ್ನ 70 ವರ್ಷದ ಸ್ವಂತ ಮಾವನೇ ಲವ್ (Love) ಮಾಡಿ ಮದುವೆಯಾಗಿರುವ (Marriage) ಘಟನೆ ಉತ್ತರಪ್ರದೇಶದಲ್ಲಿ (Uttar Pradesh) ನಡೆದಿದೆ.
ಗೋರಖ್ಪುರದ ಛಾಪಿಯಾ ಉಮ್ರಾವ್ ಗ್ರಾಮದ 70 ವರ್ಷದ ಕೈಲಾಶ್ ಯಾದವ್ ತನ್ನ 28 ವರ್ಷದ ಸೊಸೆ ಪೂಜಾಳನ್ನ ಮದುವೆಯಾಗಿದ್ದಾರೆ. ಬದಲ್ಗಂಜ್ ಕೊಟ್ವಾಲಿ ಪ್ರದೇಶದ ಛಾಪಿಯಾ ಉಮ್ರಾವ್ ಗ್ರಾಮದಲ್ಲಿ ಮದುವೆ ನಡೆದಿದೆ. ಇದನ್ನೂ ಓದಿ: ಸ್ಯಾಂಟ್ರೋ ರವಿ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು
Advertisement
Advertisement
ಮಗನ ಹೆಂಡ್ತಿಯನ್ನೇ ಮದುವೆಯಾದ ತಂದೆ: ಕೈಲಾಶ್ ಯಾದವ್ ಬದಲ್ಗಂಜ್ ಪೊಲೀಸ್ ಠಾಣೆಯಲ್ಲಿ ವಾಚ್ಮ್ಯಾನ್ (Police Station Watchman) ಆಗಿ ಕೆಲಸ ಮಾಡ್ತಿದ್ದಾರೆ. ಕೈಲಾಶ್ ಪತ್ನಿ 12 ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. ಕೈಲಾಶ್ ಅವರ ನಾಲ್ವರು ಮಕ್ಕಳಲ್ಲಿ ಮೂರನೇ ಮಗ, ಪೂಜಾಳನ್ನ ವಿವಾಹವಾಗಿದ್ದರು. ಆದರೆ ಪೂಜಾ ಪತಿಯೂ ಕೆಲ ವರ್ಷದ ಹಿಂದೆ ಸಾವನ್ನಪ್ಪಿದ್ದರು. ಇದಾದ ನಂತರ ಪೂಜಾ ಬೇರೆ ವ್ಯಕ್ತಿಯನ್ನು ಮದುವೆಯಾಗಿದ್ದರು. ಆದರೆ ಆಕೆಗೆ ಆತ ಇಷ್ಟವಾಗಿರಲಿಲ್ಲ. ಇದನ್ನೂ ಓದಿ: ಅಮಿತ್ ಶಾ ರಾಜ್ಯ ಪ್ರವಾಸದಲ್ಲಿ ಯಾವುದೇ ಅಹಿತಕರ ಘಟನೆ ಆಗದಂತೆ ಮುನ್ನೆಚ್ಚರಿಕೆ: ಅಲೋಕ್ ಕುಮಾರ್
Advertisement
Advertisement
ಇದಾದ ನಂತರ ಪೂಜಾ ಅಲ್ಲಿಂದ ಹೊರಟು ಗಂಡನ ಮನೆಗೆ ಬಂದಿದ್ದಳು. ಈ ನಡುವೆ ಮಾವನಿಗೆ ಸೊಸೆಯ ಮೇಲೆ ಪ್ರೀತಿ ಶುರುವಾಗಿದ್ದು, ಪರಸ್ಪರ ಒಪ್ಪಿ ಮದುವೆಯಾಗಿದ್ದಾಳೆ. ಸದ್ಯ ಮಾವನನ್ನೇ ಮದುವೆಯಾದ ಸೊಸೆ ಸಪ್ತಪದಿ ತುಳಿದು ಗಂಡನ ಮನೆಯಲ್ಲೇ ವಾಸವಾಗಿದ್ದಾಳೆ.
ಸದ್ಯ ಈ ಜೋಡಿಯ ಫೋಟೋ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k