ಬೀದರ್: ಹೆಣ್ಣು ಮಗುವಿನ ಜನನವಾಗುತ್ತಿದಂತೆ ತಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಆನಂದ ವಾಡಿ ಗ್ರಾಮದಲ್ಲಿ ನಡೆದಿದೆ.
ಪರಮೇಶ್ ಬೋರೆ ತಾನು ಹೆಣ್ಣು ಮಗುವಿನ ತಂದೆಯಾಗುತ್ತಿದ್ದೇನೆ ಎಂದು ತಿಳಿದ ತಕ್ಷಣ ಪಟಾಕಿ ಸಿಡಿಸಿ, ಸಿಹಿ ಹಂಚಿ ಹಬ್ಬದಂತೆ ಸಂಭ್ರಮಿಸಿದ್ದಾರೆ. ಹೆಣ್ಣು ಮಗು ಜನಿಸಿದೆ ಎಂದು ಗ್ರಾಮಸ್ಥರಿಗೆ ಸಿಹಿ ಹಂಚಿ, ಪಟಾಕಿ ಸಿಡಿಸಿ ತನ್ನ ಖುಷಿಯನ್ನು ಪರಮೇಶ್ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ʼಆರ್‌ಆರ್‌ಆರ್ʼ ರಿಲೀಸ್ ಆದ ಕೆಲವೇ ದಿನಗಳಲ್ಲಿ 100 ಮಿಲಿಯನ್ ದಾಖಲೆ
ಇಂದಿನ ಸಮಾಜದಲ್ಲಿ ಗಂಡು ಮಗು ಬೇಕು ಎನ್ನುವರೆ ಜಾಸ್ತಿ. ಹೆಣ್ಣು ಮಗು ಹುಟ್ಟಿದರೆ ತಂದೆ ಮಗುವನ್ನೆ ಬಿಟ್ಟು ಹೋಗುವ ಹಲವು ಉದಾಹರಣೆಗಳು ಇದೆ. ಆದರೆ ಹೆಣ್ಣು ಮಗು ಜನಿಸಿದಕ್ಕೆ ತಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದು ವಿಶೇಷ ಸುದ್ದಿಯಾಗಿದೆ. ಪರಮೇಶ್ ಅವರ ಸಂಭ್ರಮಕ್ಕೆ ಹಳ್ಳಿ ಜನರು ಸಾಥ್ ಕೊಟ್ಟಿದ್ದಾರೆ.