ಚೆನ್ನೈ: ಮಗಳ ಮದುವೆ ಮಾಡಿ ಹಣ, ಕಾರು, ಬಂಗಲೆಯನ್ನು ವರದಕ್ಷಿಣೆಯಾಗಿ ಕೊಡುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಕವಿ ಮಗಳ ಮದುವೆ ಮಾಡಿಕೊಟ್ಟು ಸಾಹಿತ್ಯದ ಪುಸ್ತಕಗಳನ್ನು ವರದಕ್ಷಿಣೆಯಾಗಿ ನೀಡಿದ್ದಾರೆ.
ತಮಿಳುನಾಡಿನ ಪುಡುಕೊಟ್ಟಾಯಿ ನಿವಾಸಿ ತಂಗಂ ಮೂರ್ತಿ ಅವರು ಮಗಳ ಮದುವೆಯನ್ನು ಸಾಂಪ್ರದಾಯಿಕವಾಗಿ ಅದ್ಧೂರಿಯಾಗಿ ಮಾಡಿದ್ದಾರೆ. ತಮಿಳುನಾಡಿ ಪ್ರಸಿದ್ಧ ಕವಿಗಳು, ಬರಹಗಾರರು ಬರೆದಿರುವ ಸಾಹಿತ್ಯದ ಪುಸ್ತಕಗಳನ್ನು ಮಗಳಿಗೆ ವರದಕ್ಷಿಣೆಯಾಗಿ ನೀಡಿದ್ದಾರೆ. ಫೆಬ್ರವರಿ 22 ರಂದು ಪುಡುಕೊಟ್ಟೈನ ಖಾಸಗಿ ಸಭಾಂಗಣದಲ್ಲಿ ನಡೆದ ತಂಗಂ ಮೂರ್ತಿ ಅವರ ಮಗಳ ಮದುವೆ ನಡೆಯಿತ್ತು. ಎಲ್ಲವೂ ಸಂಪ್ರದಾಯಬದ್ಧವಾಗಿಯೇ ನಡೆಯಿತು. ಆದರೆ ವರದಕ್ಷಿಣೆಯ ರೂಪ ಮಾತ್ರ ಭಿನ್ನವಾಗಿತ್ತು. ಮದುವೆಯಲ್ಲಿ ಅಲ್ಲಿನ ಸಂಪ್ರದಾಯದಂತೆ, ಸಾಂಪ್ರದಾಯಿಕ ಶೈಲಿಯಲ್ಲಿ ಅಲಂಕರಿಸಲಾದ ಒಂಬತ್ತು ಎತ್ತಿನ ಬಂಡಿಗಳಲ್ಲಿ ಈ ಅಮೂಲ್ಯ ಉಡುಗೊರೆಗಳು ಮದುವೆ ಸ್ಥಳಕ್ಕೆ ಬಂದವು. ಎತ್ತಿನಗಾಡಿಯಲ್ಲಿ ವರದಕ್ಷಿಣೆ ನೀಡಿರುವುದು ಮಾತ್ರ ತುಂಬಾ ವಿಭಿನ್ನವಾಗಿತ್ತು. ಇದನ್ನೂ ಓದಿ: ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!
Advertisement
Advertisement
ತಮಿಳು ಸಾಹಿತ್ಯ ಮತ್ತು ಕವಿತೆಗಳ ಪುಸ್ತಕಗಳನ್ನು ಗಂಟು ಕಟ್ಟಿ 9 ಎತ್ತಿನ ಗಾಡಿಗಳಲ್ಲಿ ಇರಿಸಲಾಯಿತು. ಸಾಹಿತ್ಯದ ಖಜಾನೆಗಳನ್ನು ಹೊತ್ತ ಆ ಎತ್ತಿನ ಗಾಡಿಗಳು ತಂಗಂ ಮೂರ್ತಿ ಅವರ ಮನೆಯಿಂದ ಮದುವೆಯ ಛತ್ರದ ವರೆಗೆ ಮೆರವಣಿಗೆ ಹೋದವು. ಈ ಮದುವೆ ತುಂಬಾ ವಿಶೇಷ ಮತ್ತು ವಿಭಿನ್ನವಾಗಿ ನಡೆಯುವ ಮೂಲಕವಾಗಿ ಸುದ್ದಿಯಾಗಿದೆ. ಇದನ್ನೂ ಓದಿ: ವೈದ್ಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾಗೇ ಹೆಚ್ಚಾಗಿ ಯಾಕೆ ಹೋಗ್ತಾರೆ ಗೊತ್ತಾ?
Advertisement
Advertisement
ಅವೈಯಾರ್, ತಿರುವಳ್ಳುವರ್, ಕಂಬಾರ್, ಭಾರತಿಯಾರ್, ಕಣ್ಣದಾಸನ್, ಇಳಂಗೋ ಅಡಿಗಲ್, ಭಾರತೀದಾಸನ್, ಪಟ್ಟುಕೋಟೈ ಕಲ್ಯಾಣಸುಂದರಂ ಮತ್ತು ವಾಲಿ ಸೇರಿದಂತೆ ಹಲವು ಖ್ಯಾತ ತಮಿಳು ಸಾಹಿತಿಗಳು ಮತ್ತು ಕವಿಗಳ ಪುಸ್ತಕಗಳನ್ನು ಮೆರವಣಿಗೆಯಲ್ಲಿ ಹೊತ್ತು ಸಾಗಿದರು. ಅವರೆಲ್ಲರು ಪುಸ್ತಕಗಳ ಜೊತೆಜೊತೆಗೆ ಕೈಗಳಲ್ಲಿ (ಹಲಸಿನಕಾಯಿ, ಮಾವಿನ ಹಣ್ಣು ಮತ್ತು ಬಾಳೆ ಹಣ್ಣುಗಳನ್ನು) ಕೂಡ ಹಿಡಿದಿದ್ದರು.