ಬೆಂಗಳೂರು: ಮಗುವಿಗೆ ಜನ್ಮ ಸಂಬಂಧಿ ಕಾಯಿಲೆಯಿಂದೆ ಎಂದು ಜನ್ಮ ಕೊಟ್ಟ ತಂದೆಯೇ ವಿಷವುಣಿಸಿರುವುದು ಬೆಂಗಳೂರಿನ (Bengaluru) ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೋಲಾರ (Kolar) ಜಿಲ್ಲೆಯ ಹೂತಾಂಡಹಳ್ಳಿ ನಿವಾಸಿ ಮುನಿಕೃಷ್ಣ ಎಂಬಾತ 2 ವರ್ಷದ ಮಗುವನ್ನು ಕೊಲ್ಲಲು ಪ್ರಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಡಿಸೆಂಬರ್ 22 ರಂದು ತಮಿಳುನಾಡಿನ ಬಾಗ್ಲೂರಿನ ಅಜ್ಜಿ ಮನೆಗೆ ತೆರಳಿದ್ದಾಗ ಮುನಿಕೃಷ್ಣ, ಮಗುವಿಗೆ ವಿಷವುಣಿಸಿದ್ದ. ಬಳಿಕ ಬಾಯಿ ತೊಳೆಯುತ್ತಿದ್ದ. ಮಗುವಿನ ತಾಯಿ ಮತ್ತು ಅಜ್ಜಿ ಹೋಗಿ ನೋಡಿದಾಗ ವಿಚಾರ ತಿಳಿದು ಬಂದಿತ್ತು. ಇದನ್ನೂ ಓದಿ: ಮದುವೆಗೆ ಒಪ್ಪಲಿಲ್ಲ ಅಂತ ವಿಚ್ಛೇದಿತ ಮಹಿಳೆ ಹತ್ಯೆ; ಆರೋಪಿ ರಫೀಕ್ ಆತ್ಮಹತ್ಯೆ
ಡಿಸೆಂಬರ್ 23 ರಂದು ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿತ್ತು. ಬಳಿಕ ಮುನಿಕೃಷ್ಣನನ್ನು ವಿಚಾರಿಸಿದಾಗ, ಮಗುವಿಗೆ ಜನ್ಮ ಸಂಬಂಧಿ ಖಾಯಿಲೆ ಇದೆ. ಖರ್ಚು ಮಾಡಲಿಕ್ಕೆ ಹಣವಿಲ್ಲ ಎಂದು ವಿಷ ಉಣಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಸಿದ್ದಾಪುರ ಠಾಣೆಗೆ ಮಗುವಿನ ತಾಯಿ ದೂರು ನೀಡಿದ್ದಾಳೆ. ಇದನ್ನೂ ಓದಿ: ಹುಬ್ಬಳ್ಳಿ | ಪ್ರತ್ಯೇಕ ಪ್ರಕರಣ – ಇಬ್ಬರು ಬಾಲಕಿಯರ ಮೇಲೆ ಅಪ್ರಾಪ್ತರಿಂದ ಲೈಂಗಿಕ ದೌರ್ಜನ್ಯ – 7 ಮಂದಿ ವಶಕ್ಕೆ

