ವಿಜಯಪುರ: ಎಸ್‌ಎಸ್‌ಎಲ್‌ಸಿ (SSLC Exam) ಪರೀಕ್ಷೆಗೆ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗುವಾಗ ಲಾರಿ ಡಿಕ್ಕಿಯಾದ ಪರಿಣಾಮ ತಂದೆ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಕಗ್ಗೋಡ (Kaggod) ಗ್ರಾಮದ ಬಳಿಯ 52ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತ ಬೈಕ್ ಸವಾರನನ್ನು ವೆಂಕು ಚವ್ಹಾಣ (43) ಎಂದು ಗುರುತಿಸಲಾಗಿದ್ದು, ಪುತ್ರಿಯರಾದ ಐಶ್ವರ್ಯಾ, ಪ್ರೀತಿ ಹಾಗೂ ಪಕ್ಕದ ಮನೆ ನಿವಾಸಿ ಶ್ವೇತಾ ರಾಠೋಡ್ ಗಂಭೀರವಾಗಿ ಗಾಯಗೊಂಡಿದ್ದಾರೆ.ಇದನ್ನೂ ಓದಿ: ನೇಹಾ ಗೌಡ ಮಗಳ ಅದ್ಧೂರಿ ನಾಮಕರಣ- ಪುತ್ರಿಗೆ ಮುದ್ದಾದ ಹೆಸರಿಟ್ಟ ನಟಿ
ಕುಮಟಗಿ ತಾಂಡಾದಿಂದ ತಮ್ಮ ಇಬ್ಬರು ಮಕ್ಕಳು ಹಾಗೂ ಪಕ್ಕದ ಮನೆ ನಿವಾಸಿಯನ್ನು ಕಗ್ಗೋಡದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ತೆಲಂಗಾಣ (Telangana)ಮೂಲದ TS15UA8055 ನಂಬರ್ ಲಾರಿ ಹಾಗೂ KA28HL5603 ನಂಬರಿನ ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಸದ್ಯ ಗಾಯಾಳುಗಳನ್ನು ವಿಜಯಪುರ (Vijayapura) ನಗರದ ಬಿಎಲ್‌ಡಿಇ ಆಸ್ಪತ್ರೆಗೆ ರವಾನೆ ಮಾಡಲಾಗಿದೆ,
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ರಾಜಸ್ಥಾನದಲ್ಲೂ ಕರ್ನಾಟಕ ಮಾದರಿ ಪಿಎಸ್‌ಐ ಹಗರಣ – ತಪ್ಪು ರಜಾ ಚೀಟಿ ಬರೆದು ಸಿಕ್ಕಿಬಿದ್ದ ಟಾಪರ್!