ಕೋಲಾರ: ಮಗಳ ಸಾವಿನ ಸುದ್ದಿ ತಿಳಿದ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣ ಮುತ್ಯಾಲಪೇಟೆಯಲ್ಲಿ ನಡೆದಿದೆ.
ಮೇ 20 ರಂದು ಮನೆಯಲ್ಲಿ ಗ್ಯಾಸ್ ರೀಫಿಲ್ಲಿಂಗ್ ಮಾಡುವ ವೇಳೆ ಬೆಂಕಿ ತಗುಲಿ ತಂದೆ ಶ್ರೀಕಂಠ (45) ಹಾಗೂ ಅವರ ಮಕ್ಕಳಾದ 18 ವರ್ಷದ ಮಧುಮತಿ , 10 ವರ್ಷದ ರಕ್ಷಿತ ಗಾಯಗೊಂಡಿದ್ದರು. ಅವರಲ್ಲಿ ರಕ್ಷಿತ ಎಂಬ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಾವನ್ನಪ್ಪಿದ್ದಾಳೆ.
ಮಗಳ ಸಾವಿನ ಸುದ್ದಿ ತಿಳಿದ ತಂದೆ ಶ್ರೀಕಂಠ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.