ಕೊಪ್ಪಳ: ಆಸ್ತಿಗಾಗಿ ಸ್ವಂತ ಪುತ್ರನನ್ನು ಕೊಲ್ಲಲು ತಂದೆಯೇ ಮುಂದಾದ ಘಟನೆ ಜಿಲ್ಲೆಯ ಕಾರಟಗಿ ತಾಲೂಕಿನ ಬಸವಣ್ಣ ಕ್ಯಾಂಪ್‍ನಲ್ಲಿ ನಡೆದಿದೆ.
ಕಾರಟಗಿ ತಾಲೂಕಿನ ಬಸವಣ್ಣ ಕ್ಯಾಂಪ್‍ನ ನಿವಾಸಿ ಮೆಳ್ಳುಪುಡಿ ಶ್ರೀರಾಮಮೂರ್ತಿ ತನ್ನ ಮಗ ವೆಂಕಟೇಶ್‍ನನ್ನು ಕೊಲ್ಲಲು ಮುಂದಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿವೆ. ಪಿತ್ರಾರ್ಜಿತ ಆಸ್ತಿಯನ್ನು ಮಗನಿಗೆ ತಿಳಿಸದೆ ಶ್ರೀರಾಮಮೂರ್ತಿ ಕಾರಟಗಿಯ ವಿ.ಬಿ ಚಿನಿವಾಲರ ಎಂಬ ಉದ್ಯಮಿಗೆ ಆಸ್ತಿ ಮಾರಾಟ ಮಾಡಿದ್ದನು. ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಬಳ್ಳಾರಿಯಲ್ಲಿ ವೆಂಕಟೇಶ್ ವಾಸವಾಗಿದ್ದರು. ಆದ್ರೆ 10 ವರ್ಷಗಳ ನಂತರ ಊರಿಗೆ ಬಂದಾಗ ಅಪ್ಪ ಆಸ್ತಿ ಮಾರಾಟ ಮಾಡಿರುವ ಬಯಲಾಗಿದೆ.
Advertisement
Advertisement
ಬಹುವರ್ಷಗಳ ಬಳಿಕ ಮನೆಗೆ ಬಂದ ವೆಂಕಟೇಶ್‍ಗೆ ಮನೆ ಬಿಡುವಂತೆ ವಿ.ಬಿ.ಚಿನಿವಾಲ ಒತ್ತಾಯಿಸಿದ್ದಾನೆ. ಆದ್ರೆ ವೆಂಕಟೇಶ್ ಮನೆ ಬಿಡಲು ನಿರಾಕರಿಸಿದ್ದಾರೆ. ಆಗ ತಂದೆಯೇ ವಿ.ಬಿ.ಚಿನಿವಾಲ ಬೆಂಬಲಿಗರ ಮೂಲಕ ವೆಂಕಟೇಶ್ ಮತ್ತು ಪತ್ನಿ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತು ಸಮೀಪದ ಕಾರಟಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು ಏನೂ ಪ್ರಯೋಜನವಾಗಿಲ್ಲ. ಪೊಲೀಸರು ಹಲ್ಲೆ ನಡೆಸಿದ ಪ್ರಮುಖ ಆರೋಪಿಗಳನ್ನು ಬಂಧಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
Advertisement
Advertisement
ಆಸ್ತಿ ವಿಚಾರವಾಗಿ ವೆಂಕಟೇಶ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಶ್ರೀರಾಮಮೂರ್ತಿ ವಿ.ಬಿ ಚಿನಿವಾಲ ಬೆಂಬಲಿಗರ ಮೂಲಕ ಪುತ್ರನಿಗೆ ಜೀವ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ರಕ್ಷಣೆ ಕೋರಿ ಹತ್ತಿರದ ಕಾರಟಗಿ ಪೊಲೀಸ್ ಠಾಣೆಗೆ ಹೋದರೂ ಪ್ರಯೋಜನವಾಗಿಲ್ಲ. ಪಿತ್ರಾರ್ಜಿತ ಆಸ್ತಿಗಾಗಿ ನಮ್ಮ ತಂದೆ ಅವರೊಡನೆ ಸೇರಿ ನಮ್ಮ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ವೆಂಕಟೇಶ್ ಆರೋಪಿಸುತ್ತಿದ್ದಾರೆ.
ಆಸ್ತಿ ಗೊಂದಲ ಪ್ರಕರಣ ಕೊರ್ಟ್ ನಲ್ಲಿ ಇರುವುದರಿಂದ ನ್ಯಾಯಾಂಗದ ತೀರ್ಪಿಗೆ ಬದ್ಧವಾಗಿರ್ತಿವಿ ಎಂದು ವೆಂಕಟೇಶ್ ದಂಪತಿ ಹೇಳಿದ್ದಾರೆ. ತೀರ್ಪು ಬರೊವರೆಗೂ ನಮಗೆ ರಕ್ಷಣೆ ಕೊಡಿಸಿ ಎಂದು ದಂಪತಿ ಕೊರ್ಟ್ ನಲ್ಲಿ ಮನವಿ ಮಾಡಿದ್ದಾರೆ.