– ತಂದೆ ಕೃತ್ಯ ತಾಯಿ ಬಳಿ ಹೇಳಿಕೊಂಡ್ರೂ ಪ್ರಯೋಜನವಾಗಿರ್ಲಿಲ್ಲ
ಬೆಂಗಳೂರು: ಇಬ್ಬರು ಹೆಣ್ಣು ಮಕ್ಕಳ ಮುಂದೆಯೇ ಪಾಪಿ ತಂದೆಯನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ. ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ವೀರ್ ಸಾಗರ್ ರಸ್ತೆಯಲ್ಲಿ ಘಟನೆ ನಡೆದಿದೆ.
ದೀಪಕ್ ಕುಮಾರ್ ಸಿಂಗ್(46) ಮೃತ ತಂದೆ. ತಡರಾತ್ರಿ 1.30ರ ಸುಮಾರಿಗೆ ದೀಪಕ್ ಕುಮಾರ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈತ ಮೂಲತಃ ಬಿಹಾರದವನಾಗಿದ್ದು, ಜಿಕೆವಿಕೆನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು. ಇದನ್ನೂ ಓದಿ: ವಿರಾಟ್ ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ ಪ್ರಕರಣ- ಇಂಜಿನಿಯರ್ ಅರೆಸ್ಟ್
ಇಬ್ಬರು ಹೆಣ್ಣು ಮಕ್ಕಳ ಜೊತೆ ವಾಸವಿದ್ದ ದೀಪಕ್, ಕಳೆದ 1 ವರ್ಷದಿಂದ ಮಗಳ ಮೇಲೆಯೇ ನಿರಂತರ ಅತ್ಯಾಚಾರ ಮಾಡುತ್ತಿದ್ದನು. ತಂದೆಯ ಕಿರುಕುಳದ ಬಗ್ಗೆ ತಾಯಿಯ ಬಳಿ ಮಕ್ಕಳು ಹೇಳಿಕೊಂಡಿದ್ದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಓರ್ವ ಮಗಳು ಸ್ನೇಹಿತರ ಬಳಿ ಹೇಳಿಕೊಂಡಿದ್ದಳು. ಇದನ್ನೂ ಓದಿ: ವಿವಾಹಗಳಲ್ಲಿ ಕೇಕ್ ಕತ್ತರಿಸುವಂತಿಲ್ಲ, ಶಾಂಪೇನ್ ಹಾರಿಸುವಂತಿಲ್ಲ: ಕೊಡವ ಸಮಾಜದಿಂದ ನಿಷೇಧ
ಇದರಿಂದ ಆಕ್ರೋಶಗೊಂಡ ಯುವತಿಯ ಸ್ನೇಹಿತರು ತಡರಾತ್ರಿ ಮನೆಗೆ ನುಗ್ಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದವರ ಪತ್ತೆಗೆ ಬಲೆ ಬೀಸಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.