ಮಂಗಳೂರು: ತನ್ನ 14 ವರ್ಷದ ಮಗ (Son Suicide) ಆತ್ಮಹತ್ಯೆ ಮಾಡಿಕೊಂಡ ಬೇಸರದಲ್ಲಿ ತಂದೆಯೂ (Father Suicide) ಆತ್ಮಹತ್ಯೆಗೆ ಶರಣಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಪೆರ್ಲ ನಿವಾಸಿ ಯೊಗೀಶ್ ಪೂಜಾರಿ (41) ಎಂದು ಗುರುತಿಸಲಾಗಿದೆ. ಮಗ ಆತ್ಮಹತ್ಯೆ ಮಾಡಿಕೊಂಡ 13 ದಿನಕ್ಕೆ ತಂದೆ ಯೊಗೀಶ್ ಪೂಜಾರಿ ಕೂಡ ಸೂಸೈಡ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ ಮನೆಯಲ್ಲಿ ಭೀಕರ ಸಿಲಿಂಡರ್ ಸ್ಫೋಟ – 8 ಮಂದಿಗೆ ಗಂಭೀರ ಗಾಯ
ಇದೇ ತಿಂಗಳ ಜನವರಿ 4 ರಂದು ಪುತ್ರ ಯಕ್ಷಿತ್ (14) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಹೀಗಾಗಿ ಮಗನ ಉತ್ತರ ಕ್ರಿಯೆ ಜನವರಿ 14 ರಂದು ಭಾನುವಾರ ನಡೆದಿತ್ತು. ಇದಾದ ಬಳಿಕ ಯೋಗೀಶ್ ಪೂಜಾರಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ರೇಸ್‌ನಿಂದ ಹೊರಗುಳಿದ ಭಾರತೀಯ ಮೂಲದ ವಿವೇಕ್ – ಟ್ರಂಪ್‌ಗೆ ಬೆಂಬಲ
ಯಕ್ಷಿತ್, ಉಜಿರೆ ಖಾಸಗಿ ಶಾಲೆಯಲ್ಲಿ 8 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು. ಕೆಲದಿನಗಳ ಹಿಂದೆ ಯಕ್ಷಿತ್ ಹಾಗೂ ಆತನ 6 ವರ್ಷದ ತಮ್ಮನ ಜೊತೆ ಗಲಾಟೆ ನಡೆದಿತ್ತು. ಈ ಗಲಾಟೆಯಲ್ಲಿ ಯಕ್ಷಿತ್ ಹೊಟ್ಟೆ ಮೇಲೆ ತಮ್ಮ ಕಚ್ಚಿ ಗಾಯ ಮಾಡಿದ್ದ. ಈ ವಿಚಾರದಲ್ಲಿ ನೊಂದು ತಮ್ಮನ ಎದುರೇ ಅಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದ. ತಂದೆ -ತಾಯಿ ಕೆಲಸಕ್ಕೆ ಹೋದ ಬಳಿಕ ಮನೆಯಲ್ಲಿ ತಾಯಿಯ ಸೀರೆಯನ್ನು ತೆಗೆದುಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ.
ಈ ಎರಡೂ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.