3 ವರ್ಷದ ಮಗಳ ಕಿವಿಯನ್ನೇ ಕತ್ತರಿಸಿದ ತಂದೆ!

Public TV
2 Min Read
father ear

ನವದೆಹಲಿ: ತಂದೆಯೊಬ್ಬ ತನ್ನ 3 ವರ್ಷದ ಪುಟ್ಟ ಮಗಳ ಕಿವಿಯನ್ನೇ ಕತ್ತರಿಸಿದ ವಿಚಿತ್ರ ಘಟನೆ ದೆಹಲಿಯಲ್ಲಿ ನಡೆದಿದೆ.

35 ವರ್ಷದ ಅಮೃತ್ ಬಹದ್ದೂರ್ ಈ ಕೃತ್ಯವೆಸಗಿದ್ದು ಇದೀಗ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಗುರುವಾರ ಬೆಳಿಗ್ಗೆ ದೆಹಲಿಯ ಜಿಟಿಬಿಒ ಎನ್‍ಕ್ಲೇವ್‍ನಲ್ಲಿ ಈ ಘಟನೆ ನಡೆದಿದೆ.

delhi father

ದೆವ್ವ ಹೇಳ್ತಂತೆ!: ಕುಟುಂಬಸ್ಥರ ಪ್ರಕಾರ ಕೆಲವು ತಿಂಗಳ ಹಿಂದೆ ಒಂದೂವರೆ ವರ್ಷದ ಮಗಳು ಮೃತಪಟ್ಟಿದ್ದು ಅಂದಿನಿಂದ ಬಹದ್ದೂರ್ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಎನ್ನಲಾಗಿದೆ. ಅಂದಿನಿಂದ ದೆವ್ವ ಭೂತ ಎಂಬ ಭ್ರಮೆಗಳನ್ನ ಹೊಂದಿದ್ದು, ಎರಡನೇ ಮಗಳ ಕಿವಿ ಕತ್ತರಿಸುವಂತೆ ದೆವ್ವ ಹೇಳಿತು ಎಂದು ಬಹದ್ದೂರ್ ಹೇಳಿದ್ದಾನೆ.

ಬಹದ್ದೂರ್ ಕ್ಲೀನರ್ ಆಗಿ ಕೆಲಸ ಮಾಡ್ತಿದ್ದು, ಮಧ್ಯರಾತ್ರಿ ಸುಮಾರು 1.30ರ ಸಮಯದಲ್ಲಿ ಮನೆಗೆ ಬಂದಿದ್ದ. ಈ ವೇಳೆ ಮದ್ಯಪಾನ ಮಾಡಿದ್ದ. ಈತನಿಗೆ ಈ ಕೃತ್ಯವೆಸಗಲು ಏನೋ ಒಂದು ಪ್ರಚೋದನೆ ನೀಡುತ್ತಿದೆ ಎನ್ನಿಸುತ್ತಿತ್ತಂತೆ. ಒಂದು ವೇಳೆ ಹಾಗೆ ಮಾಡದಿದ್ದರೆ ಎರಡನೇ ಮಗಳನ್ನ ಕಳೆದುಕೊಳ್ಳಬಹುದು ಎಂದುಕೊಂಡಿದ್ದನಂತೆ. ಹೀಗಾಗಿ ಮಗಳ ಕಿವಿಯನ್ನ ಕತ್ತರಿಸಿದೆ ಎಂದಿದ್ದಾನೆ.

ಈ ವೇಳೆ ಕುಟುಂಬಸ್ಥರು ಎಚ್ಚರಗೊಂಡು ಚೀರಾಡಿದ್ದಾರೆ. ನಂತರ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು ಬಾಲಕಿಯನ್ನ ರಕ್ಷಿಸಲಾಗಿದೆ ಎಂದು ಡಿಸಿಪಿ ನೂಪುರ್ ಪ್ರಸಾದ್ ಎಎನ್‍ಐಗೆ ತಿಳಿಸಿದ್ದರೆ.

delhi father 1

ಬಾಲಕಿಯ ತಾಯಿ ಮಧ್ಯಪ್ರವೇಶಿಸಲು ಯತ್ನಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಬಹದ್ದೂರ್ ಹೆಂಡತಿಯನ್ನ ಹೊಡೆದು, ಮನೆ ಬಿಟ್ಟು ಹೋಗುವಂತೆ ಹೇಳಿದ್ದ. ನಂತರ ಹೆಂಡತಿ ಹಾಗೂ ಉಳಿದ ಐವರು ಮಕ್ಕಳನ್ನು ಮೇಲ್ಮಡಿಗೆ ಕರೆದುಕೊಂಡು ಹೋಗಿ ಬಾಗಿಲನ್ನ ಲಾಕ್ ಮಾಡಿದ್ದ. ನಂತರ ವಾಪಸ್ ಬಂದು ಮಗಳಿಗೆ ಮತ್ತಷ್ಟು ಹಿಂಸೆ ನೀಡಿ ಕಿವಿಯನ್ನ ಕತ್ತರಿಸಿದ ಎಂದು ಹಿರಿಯ ಅಧಿಕಾರಿಯೊಬ್ಬರು ಪ್ರತಿಕೆಗೆ ತಿಳಿಸಿದ್ದಾರೆ.

ಕಿವಿಯನ್ನು ಕತ್ತರಿಸಿದ್ರೂ ದೆವ್ವಕ್ಕೆ ತೃಪ್ತಿಯಾಗ್ಲಿಲ್ಲ ಎಂದು ಹೇಳಿ ಬಹದ್ದೂರ್ ಮಗಳ ಕುತ್ತಿಗೆಯಿಂದ ರಕ್ತ ಬೇಕು ಎಂದಿದ್ದ. ಈ ವೇಳೆ ಬಾಲಕಿ ಓಡಿಹೋಗಲು ಯತ್ನಿಸಿದ್ದು ಆತ ಆಕೆಯನ್ನು ಹಿಡಿದುಕೊಂಡಿದ್ದಾನೆ. ಬಾಲಕಿಯ ತಾಯಿ ಜೋರಾಗಿ ಕಿರುಚಾಡೋದನ್ನ ಕೇಳಿ ಅಕ್ಕಪಕ್ಕದ ಮನೆಯವರು ಓಡಿಬಂದು ಪೊಲೀಸರಿಗೆ ಕರೆ ಮಾಡಿದ್ರು. ನಂತರ ಪೊಲೀಸರು ಬಹದ್ದೂರ್ ಮನೆ ತಲುಪಿದ್ರು. ಆತ ಕುತ್ತಿಗೆಯನ್ನು ಸೀಳುವ ಮುನ್ನವೇ ಆತನನ್ನ ಹಿಡಿದುಕೊಳ್ಳಲಾಯ್ತು ಎಂದು ಹಿರಿಯ ಅಧಿಕಾರಿಯಬ್ಬರು ಹೇಳಿದ್ದಾರೆ. ಬಾಲಕಿಯನ್ನು ಸದ್ಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ.

ಬಹದ್ದೂರ್‍ನ ಅಣ್ಣ 7 ವರ್ಷಗಳ ಹಿಂದೆ ತೀರಿಕೊಂಡಿದ್ದರು. ಅಣ್ಣನ ಸಾವಿನ ನಂತರ ಆತ 4 ಮಕ್ಕಳಿದ್ದ ಅತ್ತಿಗೆಯನ್ನೇ ಮದುವೆಯಾಗಿದ್ದಾನೆಂದು ವರದಿಯಾಗಿದೆ.

delhi father 2

Share This Article
Leave a Comment

Leave a Reply

Your email address will not be published. Required fields are marked *