Connect with us

Crime

ಶಾಲೆಯಲ್ಲಿ ಅತ್ಯಾಚಾರಕ್ಕೊಳಗಾಗಿ ರಕ್ತಸ್ರಾವವಾಗ್ತಿದ್ದ ಮಗಳನ್ನು ಎತ್ತಿಕೊಂಡೇ ಆಸ್ಪತ್ರೆಗೆ ಓಡಿದ ತಂದೆ!

Published

on

ಪಾಟ್ನಾ: 11 ವರ್ಷದ ಬಾಲಕಿಯೊಬ್ಬಳ ಮೇಲೆ ಶಾಲೆಯ ಹಿರಿಯ ವಿದ್ಯಾರ್ಥಿಯೊಬ್ಬ ಅತ್ಯಾಚಾರವೆಸಗಿರೋ ಆಘಾತಕಾರಿ ಘಟನೆ ಶುಕ್ರವಾರ ಬೆಳಗ್ಗೆ ಭೋಜ್ ಪುರ್ ಜಿಲ್ಲೆಯಲ್ಲಿ ನಡೆದಿದೆ.

ಕಾಮುಕ 5 ರೂ. ಕೊಡುವ ಆಮಿಷ ಒಡ್ಡಿ ಬಳಿಕ ಬಾಲಕಿಯನ್ನ ಹತ್ತಿರದ ಹೊಲದ ಬಳಿ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಇದರಿಂದಾಗಿ ಬಾಲಕಿ ತೊಟ್ಟ ಬಟ್ಟೆ ರಕ್ತಸಿಕ್ತವಾಗಿತ್ತು. ಸದ್ಯ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಅರಾ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿ ಪೂನಮ್ ಹೇಳಿದ್ದಾರೆ.

ಈ ಕುರಿತು ಬಾಲಕಿಯಿಂದ ಹೇಳಿಕೆಯನ್ನು ಪಡೆದುಕೊಂಡಿದ್ದು, ಸುಮಾರು 11 ಗಂಟೆ ವೇಳೆಗೆ ಶಾಲೆಯ ಬಾತ್ ರೂಮ್ ಗೆ ತೆರಳಿದಾಗ ಈ ಘಟನೆ ನಡೆದಿದ್ದಾಗಿ ಹೇಳಿದ್ದಾಳೆ. ಶಾಲೆಯ ಹಿರಿಯ ವಿದ್ಯಾರ್ಥಿ ಅಪು ಸಾಹ್ ಈ ಕೃತ್ಯವೆಸಗಿದ್ದು, ಬಳಿಕ ಬಾಲಕಿ ಶಾಲೆಯ ಶಿಕ್ಷಕರಿಗೆ ಮಾಹಿತಿ ನೀಡಿದ್ದಾಳೆ.

ಘಟನೆಯಿಂದಾಗಿ ನಡೆಯಲಾರದ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಆಕೆಯ ತಂದೆ ಎತ್ತಿಕೊಂಡೇ ಆಸ್ಪತ್ರೆಗೆ ತೆರಳಿದ್ದಾರೆ. ತಂದೆಯ ದುಃಖ ಎಷ್ಟಿತ್ತೆಂಬುದು ಫೋಟೋಗಳಿಂದ ತಿಳಿಯುತ್ತದೆ.

Click to comment

Leave a Reply

Your email address will not be published. Required fields are marked *