ಕಲಬುರಗಿ: ಎಸ್‍ಎಸ್‍ಎಲ್‍ಸಿ ಯಲ್ಲಿ ಪಾಸ್ ಆಗಿದ್ದಕ್ಕೆ ತಂದೆಯೊಬ್ಬರು ತಮ್ಮ ಮಗನನ್ನು ಡಿಜೆ ಬ್ಯಾಂಡ್‍ನೊಂದಿಗೆ ಮೆರವಣಿಗೆ ಮೂಲಕ ಗ್ರಾಮಕ್ಕೆ ಕರೆತಂದಿದ್ದಾರೆ.
Advertisement
ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಬೆನಕನಳ್ಳಿ ಗ್ರಾಮದ ದೇವಪ್ಪ ಎಂಬವರ ಮಗ ಸೇಡಂ ಪಟ್ಟಣದ ಸಿದ್ದಾರ್ಥ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದ. ಪರೀಕ್ಷೆ ಬರೆದ ನಂತರ ತನ್ನ ಮಗ ಫೇಲಾಗ್ತಾನೆ ಎಂದು ದೇವಪ್ಪ ಅಂದುಕೊಂಡಿದ್ದರು. ಆದ್ರೆ ಫಲಿತಾಂಶ ಬಂದ ನಂತರ ತಂದೆ ಅಚ್ಚರಿಗೊಂಡಿದ್ದರು. ಯಾಕಂದ್ರೆ ಫೇಲ್ ಆಗ್ತಾನೆ ಎಂದುಕೊಂಡಿದ್ದ ಮಗ ಶೇಕಡಾ 51ರಷ್ಟು ಅಂಕಗಳನ್ನ ಪಡೆದು ಪಾಸಾಗಿದ್ದ.
Advertisement
Advertisement
ಇದರಿಂದ ಸಂತಸಗೊಂಡ ತಂದೆ ದೇವಪ್ಪ ಮಗನನ್ನ ಡಿಜೆ ಮತ್ತು ಬ್ಯಾಂಡ್ ಮೂಲಕ ಮೆರವಣಿಗೆ ಮೂಲಕ ಗ್ರಾಮಕ್ಕೆ ಕರೆತಂದಿದ್ದಾರೆ. ಇದನ್ನ ನೋಡಿದ ಗ್ರಾಮಸ್ಥರು ಕೂಡ ಸಖತ್ ಖುಷ್ ಆಗಿದ್ದಾರೆ.
Advertisement